BIG NEWS: ಧರ್ಮಸ್ಥಳ ಅಥವಾ ಧರ್ಮಾಧಿಕಾರಿ ವಿರುದ್ಧ ಯಾರೂ ಇಲ್ಲ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ

ಬೆಂಗಳೂರು: ಧರ್ಮಸ್ಥಳ ಅಥವಾ ಧರ್ಮಾಧಿಕಾರಿ ವಿರುದ್ಧವಾಗಿ ಯಾರೂ ಇಲ್ಲ ಎಂದು ಸಚಿವ ರಾಮಲಿಂಗಾರೆಡ್ದಿ ತಿಳಿಸಿದ್ದಾರೆ.

ವಿಧಾನಸೌಧ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಧರ್ಮಸ್ಥಳ ಪ್ರಕರಣದಲ್ಲಿ ಎಸ್ ಐಟಿ 14-15 ಕಡೆ ಅಗೆದರೂ ಸಾಕ್ಷ್ಯ ಸಿಕ್ಕಿಲ್ಲ. ಧರ್ಮಸ್ಥಳದ ಬಗ್ಗೆ ಯಾಗಲಿ, ಧರ್ಮಾಧಿಕಾರಿ ವಿರುದ್ಧವಾಗಲಿ ಯಾರೂ ಇಲ್ಲ. ಒಂದು ಕ್ಲಾರಿಟಿ ಸಿಗಬೇಕು ಅಂತಾ ಎಸ್ ಐಟಿ ರಚಿಸಲಾಗಿದೆ. ಈ ಬಗ್ಗೆ ಗೃಹ ಸಚಿವರು ಸದನದಲ್ಲಿ ಸ್ಪಷ್ಟನೆ ನೀಡಲಿದ್ದಾರೆ ಎಂದರು.

ಬಿಜೆಪಿಯವರಿಗಿಂತಲೂ ಕಾಂಗ್ರೆಸ್ ನಲ್ಲಿ ಧರ್ಮಸ್ಥಳ ಹಾಗೂ ಮಂಜುನಾಥಸ್ವಾಮಿ ಭಕ್ತರಿದ್ದಾರೆ. ಈ ಪ್ರಕರಣದಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ ಎಂದು ಹೇಳಿದರು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read