ಮಂಗಳೂರು: ಧರ್ಮಸ್ಥಳದ ವಿವಿಧೆಡೆ ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಅಧಿಕಾರಿಗಳು ಇಂದು ಉತ್ಖನನ ಕಾರ್ಯಕ್ಕೆ ಬ್ರೇಕ್ ನೀಡಿದ್ದಾರೆ.
ಎಸ್ ಐಟಿ ಕಚೇರಿಯಲ್ಲಿ ಇಂದು ದೂರುದಾರ ಮಾಸ್ಕ್ ಮ್ಯಾನ್ ವಿಚಾರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಎಐಟಿ ಕಚೇರಿಗೆ ಮಾಸ್ಕ್ ಮ್ಯಾನ್ ಹಾಜರಾಗಿದ್ದಾನೆ.
ಧರ್ಮಸ್ಥಳದ ವಿವಿಧೆಡೆಗಳಲ್ಲಿ ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ಮಾಸ್ಕ್ ಮ್ಯಾನ್ ತೋರಿಸಿರುವ ೧೭ ಸ್ಥಳಗಳಲ್ಲಿ ಈಗಾಗಲೇ ಶೋಧಕಾರ್ಯ ಪೂರ್ಣಗೊಂಡಿದ್ದು, ಅಸ್ಥಿಪಂಜರಕ್ಕಾಗಿ ಹುಡುಕಾಟ ನಡೆಸಲಾಗಿದೆ. ಆರನೇ ಪಾಯಿಂಟ್ ಹೊರತುಪಡಿಸಿ ಬೇರಾವ ಸ್ಥಳದಲ್ಲಿಯೂ ಅಸ್ಥಿಪಂಜರಗಳು ಪತ್ತೆಯಾಗಿಲ್ಲ ಎನ್ನಲಾಗಿದೆ.
ಈನಡುವೆ ಎಸ್ ಐಟಿ ತಂಡ ಇಂದು ಶೋಧಕಾರ್ಯಾಚರಣೆ ಸ್ಥಗಿತಗೊಳಿಸಿದೆ. ಇಂದು ದೂರುದಾರ ಮಾಸ್ಕ್ ಮೆನ್ ವಿಚಾರಣೆ ಆರಂಭಿಸಿದೆ. ದೂರುದಾರ ಮಾಸ್ಕ್ ಮೆನ್ ಬಿಗಿ ಭದ್ರತೆಯಲ್ಲಿ ಹಾಗೂ ವಕೀಲರ ಜೊತೆಗೂಡಿ ಬೆಳ್ತಂಗಡಿಯ ಎಸ್ ಐಟಿ ಕಚೇರಿಗೆ ಹಾಜರಾಗಿದ್ದು, ವಿಚಾರಣೆ ಆರಂಭವಾಗಿದೆ.