ಬೆಂಗಳೂರು: ಸಿನಿಮಾ ಗೆಲ್ಲಲು ಸ್ಟಾರ್ ನಟರೇ ಬೇಕಿಲ್ಲ ಎಂದು ನಟಿ ರಮ್ಯಾ ಹೇಳಿದ್ದಾರೆ. ದರ್ಶನ್ ಜೈಲಿಗೆ ಹೋಗಿದ್ದರಿಂದ ಚಿತ್ರರಂಗಕ್ಕೆ, ಸರ್ಕಾರಕ್ಕೆ ನಷ್ಟವಾಗುತ್ತದೆ ಎಂದಿದ್ದ ನಿರ್ಮಾಪಕರಿಗೆ ಮತ್ತು ಕೊಲೆ ಆರೋಪಿ ದರ್ಶನ್ ಗೆ ನಟಿ ರಮ್ಯಾ ಪರೋಕ್ಷವಾಗಿ ತಿರುಗೇಟು ನೀಡಿದ್ದಾರೆ.
ಸಿನಿಮಾ ಗೆಲ್ಲಲು ದೊಡ್ಡ ಹೀರೋ ಬೇಕಾಗಿಲ್ಲ. ಚಿತ್ರಕಥೆ ಚೆನ್ನಾಗಿದ್ದರೆ ಫ್ಯಾಮಿಲಿ ಆಡಿಯನ್ಸ್ ಬರುತ್ತಾರೆ. ‘ಸು ಫ್ರಂ ಸೋ’ ಚಿತ್ರದಿಂದ ಏನು ಕಲಿತಿದ್ದೇವೆ ಹೇಳಿ. ಚಿತ್ರದಲ್ಲಿ ಇರುವವರೆಲ್ಲ ಹೊಸಬರು. ಕಥೆ ಚೆನ್ನಾಗಿದ್ದರೆ ಸಿನಿಮಾ ಹಿಟ್ ಆಗುತ್ತದೆ. ಸಿನಿಮಾ ಗೆಲ್ಲಲು ದೊಡ್ಡ ಹೀರೋ ಬೇಕಾಗಿಲ್ಲ. ದುಬಾರಿ, ಬಜೆಟ್ ಸ್ಟಾರ್ ನಟರು ಇಲ್ಲದೆಯೂ ಸಿನಿಮಾ ಗೆಲ್ಲಿಸಬಹುದು ಎನ್ನುವುದಕ್ಕೆ ‘ಸು ಫ್ರಂ ಸೋ’ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ.
ದರ್ಶನ್ ರೀತಿಯ ಸ್ಟಾರ್ ನಟರು ಜೈಲಿಗೆ ಹೋದಾಗ ಚಿತ್ರರಂಗಕ್ಕೆ ನಷ್ಟವಾಗುತ್ತದೆಯೇ? ಸ್ಟಾರ್ ನಟರು ಸಿನಿಮಾ ಮಾಡದಿದ್ದರೆ ಸಿನಿಮಾ ರಂಗ ನಷ್ಟಕ್ಕೆ ತಿರುಗುತ್ತಾ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ರಮ್ಯಾ, ‘ಸು ಫ್ರಂ ಸೋ’ ಚಿತ್ರದಲ್ಲಿ ಯಾವ ಸ್ಟಾರ್ ನಟರು ಇದ್ದಾರೆ? ಕಂಟೆಂಟ್ ಚೆನ್ನಾಗಿದ್ದರೆ ಸಿನಿಮಾ ಗೆಲ್ಲುತ್ತದೆ ಎಂದು ಹೇಳಿದ್ದಾರೆ.