ನವದೆಹಲಿ: ಮತಗಳ್ಳತನ ಪ್ರಕರಣ ಸಂಬಂಧ ಚುನಾವಣಾ ಆಯೋಗದ ವಿರುದ್ಧ ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಆರೋಪಕ್ಕೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗ ಪ್ರತಿಕ್ರಿಯೆ ನೀಡಿದೆ. ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕೇಂದ್ರ ಚುನಾವಣಾ ಮುಖ್ಯ ಆಯುಕ್ತ ಜ್ಞಾನೇಶ್ ಕುಮಾರ್, ಸ್ಪಷ್ಟನೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜ್ಞಾನೇಶ್ ಕುಮಾರ್, ಚುನಾವಣಾ ಆಯೋಗದ ವಿರುದ್ಧ ಇದೊಂದು ಗಂಭೀರವಾದ ಆರೋಪ. ಮತಗಳ್ಳತನವಾಗಿದೆ ಎಂಬ ನಿಮ್ಮ ಆರೋಪ ಸರಿಯಲ್ಲ. ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ನಡುವೆ ಭೇದ-ಭಾವ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಮಗೆ ಆಡಳಿತ ಹಾಗೂ ವಿಪಕ್ಷಗಳು ಎರಡೂ ಒಂದೇ. ಸಾಂವಿಧಾನಿಕ ಕರ್ತವ್ಯದಿಂದ ಆಯೋಗ ಹಿಂದೆಸರಿಯಲ್ಲ. ಬಿಹಾರದಲ್ಲಿ ಎಸ್ ಐಆರ್ ಪ್ರಕ್ರಿಯೆ ಆರಂಭವಾಗಿದೆ. ಬಿಹಾರದ 7 ಕೋಟಿ ಜನ ಚುನಾವಣಾ ಆಯೋಗದೊಂದಿಗೆ ಇದ್ದಾರೆ ಎಂದು ತಿಳಿಸಿದ್ದಾರೆ.