ಬೆಂಗಳೂರು: ದೂರುದಾರನಿಂದ ಲಂಚ ಪಡೆಯುತ್ತಿದ್ದ ವೇಳೆ ಪಿಎಸ್ ಐ, ಸಿಪಿಐ ಲೋಕಾಯುಕ್ತ ಬಲೆಗೆ ಬಿದ್ದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಬೆಂಗಳೂರಿನ ರಾಮಮೂರ್ತಿನಗರ ಪೊಲೀಸ್ ಠಾಣೆ ಇನ್ಸೆಕ್ಟರ್ ರಾಜಶೇಖರ್, ಪಿಎಸ್‌ಐ ರುಮಾನ್ ಪಾಷಾ ಗೂ ಖಾಸಗಿ ವ್ಯಕ್ತಿ ಡಿಜೆ ಹಳ್ಳಿಯ ಇಮ್ರಾನ್ ಬಾಬು ಲೋಕಾಯುಕ್ತ ಬಲೆಗೆ ಬದ್ದವರು.
ಕೆಆರ್ ಪುರ ನಿವಾಸಿ ಮಂಜುನಾಥ್ ಎಂಬವರು ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಎರಡು ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟು ಒಂದು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಸಿಪಿಐ, ಪಿಎಸ್‌ಐ ಸೇರಿ ಮೂವರು ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.