ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಅಭಿಮಾನಿಗಳಿಗೆ ಪತ್ನಿ ವಿಜಯಲಕ್ಷ್ಮಿ ದರ್ಶನ್ ಮತ್ತೊಂದು ಸಂದೇಶ ನೀಡಿದ್ದಾರೆ.
ದರ್ಶನ್ ನಿಮ್ಮೆಲ್ಲರನ್ನು ತನ್ನ ಹೃದಯದಲ್ಲಿ ಹೊತ್ತುಕೊಂಡಿದ್ದಾರೆ. ದರ್ಶನ್ ನಿಮ್ಮೊಂದಿಗೆ ನೇರವಾಗಿ ಕನೆಕ್ಟ್ ಆಗುವವರೆಗೂ ನಾನು ಅವರ ಸೋಶಿಯಲ್ ಮೀಡಿಯಾ ಹ್ಯಾಂಡಲ್ ಮಾಡುತ್ತೇನೆ. ದರ್ಶನ್ ಸಿನಿಮಾ ಅಪ್ಡೇಟ್ ಮತ್ತು ಪ್ರಚಾರಗಳನ್ನು ಹಂಚಿಕೊಳ್ಳುತ್ತೇನೆ. ನಿಮ್ಮ ಪ್ರೀತಿ, ಪ್ರಾರ್ಥನೆ, ತಾಳ್ಮೆ ದರ್ಶನ್ ಅವರಿಗೆ ಅಪಾರ ಶಕ್ತಿ ನೀಡುತ್ತದೆ. ಈ ಏಕತೆ ಮತ್ತು ಸಕಾರಾತ್ಮಕತೆಯನ್ನು ಉಳಿಸಿಕೊಳ್ಳೋಣ. ಅವರು ಶೀಘ್ರವೇ ಅದೇ ಪ್ರೀತಿ ಮತ್ತು ಶಕ್ತಿಯೊಂದಿಗೆ ಹಿಂತಿರುಗುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಪತ್ನಿ ವಿಜಯಲಕ್ಷ್ಮಿ ಪೋಸ್ಟ್ ಮಾಡಿದ್ದಾರೆ.
ನಿನ್ನೆ ಜೈಲಿಂದ ದರ್ಶನ್ ಅವರು ಅಭಿಮಾನಿಗಳಿಗಾಗಿ ಕಳಿಸಿದ ಸಂದೇಶವನ್ನು ಅವರು ಪೋಸ್ಟ್ ಮಾಡಿದ್ದರು.
