ಯಾದಗಿರಿ: ಪೋಷಕರಿಂದ ಹಣ ಪಡೆದು ಶಾಲಾ ದಾಖಲಾತಿಯಲ್ಲಿ ವಿದ್ಯಾರ್ಥಿನಿಯ ಜಾತಿ ಕಾಲಂ ತಿದ್ದಿದ ಮುಖ್ಯ ಶಿಕ್ಷಕನನ್ನು ಅಮಾನತು ಮಾಡಲಾಗಿದೆ.
ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ, ಕರಡಕಲ್ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯ ಶಿಕ್ಷಕ ಮನೋಹರ ಪತ್ತಾರ ಅಮಾನತುಗೊಂಡವರು. ವಿದ್ಯಾರ್ಥಿನಿಯ ಶಾಲಾ ದಾಖಲಾತಿ ಕಾಲಂ ತಿದ್ದಿದ ಆರೋಪದಡಿ ಅವರನ್ನು ಅಮಾನತು ಮಾಡಲಾಗಿದೆ.
ಪೋಷಕರಿಂದ ಹಣ ಪಡೆದ ಮನೋಹರ ಪತ್ತಾರ ಜಾತಿ ಕಾಲಂನಲ್ಲಿ ವೈಟ್ನರ್ ಹಚ್ಚಿದ್ದು ಮೂಲ ಜಾತಿಯ ಬದಲಿಗೆ ತಳವಾರ ಎಂದು ಬರೆದಿದ್ದರು. ಈ ಬಗ್ಗೆ ದೂರು ದಾಖಲಾಗಿ ಪರಿಶೀಲನೆ ನಡೆಸಿದ ಬಳಿಕ ಮನೋಹರ ಅವರನ್ನು ಡಿಡಿಪಿಐ ಅಮಾನತು ಮಾಡಿದ್ದಾರೆ.