ಬೆಂಗಳೂರು: ಬೆಂಗಳೂರಿನ ನಗರ್ತಪೇಟೆಯಲ್ಲಿ ಪ್ಲಾಸ್ಟಿಕ್ ಮ್ಯಾಟ್ ಅಂಗಡಿಯಲ್ಲಿ ಅಗ್ನಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಕಟ್ಟಡ ಮಾಲೀಕರಾದ ಬಾಲಕೃಷ್ಣಯ್ಯ ಶೆಟ್ಟಿ, ಸಂದೀಪ್ ಶೆಟ್ಟಿ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಮೃತ ಮದನ್ ಸಹೋದರ ಗೋಪಾಲ್ ಸಿಂಗ್ ಅವರ ದೂರಿನ ಮೇರೆಗೆ ಕೇಸು ದಾಖಲಿಸಲಾಗಿದೆ. ಸುರಕ್ಷತೆ ಕ್ರಮ ಕೈಗೊಳ್ಳದೆ ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ಆರೋಪದಡಿ ಕೇಸ್ ದಾಖಲಾಗಿದೆ.
ಐವರ ಸಾವಿಗೆ ಪರೋಕ್ಷವಾಗಿ ಕಟ್ಟಡ ಮಾಲೀಕರೇ ಕಾರಣವೆಂದು ದೂರು ದಾಖಲಿಸಲಾಗಿದೆ. ಮದನ್ ಕುಮಾರ್ ಪುರೋಹಿತ್(36) ಸಂಗೀತಾ ಕನ್ವರ್(32) ಹಾಗೂ ಸುರೇಶ್ ಕುಮಾರ್(26), ಮಿತೇಶ್(8), ವಿಹಾನ್(5) ಸಜೀವ ದಹನವಾಗಿದ್ದರು. ಬೆಂಗಳೂರು ನಗರದ ನಗರ್ತಪೇಟೆಯಲ್ಲಿ ಅಗ್ನಿ ಅವಘಡ ಸಂಭವಿಸಿತ್ತು.