ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ ಐಟಿ ಈವರೆಗೆ ನಡೆಸಿರುವ ತನಿಖೆ ಬಗ್ಗೆ ಮಧ್ಯಂತರ ವರದಿ ಬಿಡುಗಡೆ ಮಾಡಬೇಕು. ಇಲ್ಲವಾದಲ್ಲಿ ಸದನದಲ್ಲಿ ನಾವು ಹೋರಾಟ ನಡೆಸಬೇಕಾಗುತ್ತದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾಅತನಾಡಿದ ಆರ್.ಅಶೋಕ್, ಪ್ರತಿ ದಿನ ಒಂದು ಲಕ್ಷ ಕೇಸ್ ಬರುತ್ತದೆ. ಸದನದಲ್ಲಿ ನಾವು ಎಸ್ ಐಟಿ ರಚನೆಗೆ ಆಗ್ರಹಿಸಿ ಗಲಾಟೆ ಮಾಡಿದರೂ ಎಸ್ ಐಟಿ ರಚನೆ ಮಾಡದವರು ಧರ್ಮಸ್ಥಳದ ಈ ಕೇಸ್ ಬಗ್ಗೆ ಅಷ್ಟು ಬೇಗ ಎಸ್ ಐಟಿ ರಚನೆ ಮಾಡಿ ತನಿಖೆಗೆ ಸೂಚಿಸಿದ್ದೀರಿ. ಕಾರಣ ಸಿಎಂ ಸಿದ್ದರಾಮಯ್ಯ ಸುತ್ತ ಟಿಪ್ಪು ಗ್ಯಾಂಗ್ ಸುತ್ತುವರೆದಿದೆ ಎಂದು ಕಿಡಿಕರೈದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಅವರೇ ಷಡ್ಯಂತ್ರ ನಡೆದಿದೆ ಎಂದಿದ್ದಾರೆ. ಅವರು ಹೇಳಿದ್ದಕ್ಕೆ ಸರ್ಕಾರ ಒಪ್ಪಿಕೊಂಡಿದೆ. ಈಗ ನಾವು ಆಗ್ರಹ ಮಾಅಡುತ್ತಿದ್ದೇವೆ. ಎಸ್ ಐಟಿ ಮಧ್ಯಂತರ ವರದಿ ಬಿಡುಗಡೆ ಮಾಡಿ, ಆ ಷಡ್ಯಂತ್ರದ ಹಿಂದಿರುವವರು ಯಾರು ಎಂದು ಹೇಳಲಿ ಇಲ್ಲವಾದಲ್ಲಿ ನಾವು ಸದನದಲ್ಲಿ ಹೋರಾಟ ನಡೆಸುವುದು ನಿಶ್ಚಿತ ಎಂದರು.