ಬೆಂಗಳೂರು: ಧರ್ಮಸ್ಥಳದ ವಿರುದ್ಧ ಷಡ್ಯಂತ್ರ, ಅಪಪ್ರಚಾರ ಮಾಡುತ್ತಿರುವುದನ್ನು ಖಂಡಿಸಿರುವ ವಿಶ್ವ ಹಿಂದೂ ಪರಿಷತ್, ರಾಜ್ಯಾದ್ಯಂತ ಶಿವ ಪಂಚಾಕ್ಷರು ಮಂತ್ರ ಪಠಣಕ್ಕೆ ಕರೆ ನೀಡಿದೆ.
ಆಗಸ್ಟ್ 18ರಿಂದ ಒಂದು ವಾರಗಳ ಕಾಲ ರಾಜ್ಯದ ಪ್ರತಿ ಮನೆ ಮನೆಗಳಲ್ಲಿ ಶಿವ ಪಂಚಾಕ್ಷರಿ ಜಪ ಪಠಣ ಮಾಡಿ ಅನುಷ್ಠಾನಕ್ಕೆ ತರುವಂತೆ ವಿ ಹೆಚ್ ಪಿ ಕರೆ ನೀಡಿದೆ.
ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ದೂರವಾಗಿ ಭಕ್ತಿ, ಶ್ರದ್ಧೆ ಹೆಚ್ಚಾಗಲಿ ಎಂದು ಸಂಕಲ್ಪ ಮಾಡಿ ರಾಜ್ಯಾದ್ಯಂತ ‘ಓಂ ನಮಃ ಶಿವಾಯ’ ಎಂಬ ಶಿವ ಪಂಚಾಕ್ಷರಿ ಮಂತ್ರ ಪಠಣ ಮಾಡಬೇಕು. ಧಾರ್ಮಿಕ ಸಂಘ-ಸಂಸ್ಥೆಗಳು, ದೇವಸ್ಥಾನಗಳಲ್ಲಿ ಜಪ ಮಾಡಲು ಮನವಿ ಮಾಡಿದೆ. ಮನೆಗಳಲ್ಲಿ ಸಾಮೂಹಿಕವಾಗಿ ಜಪ ಪಠಣ ಮಾಡುವಂತೆ ಕೋರಲಾಗಿದೆ.