ಚಿಕ್ಕಮಗಳೂರು: ಧರ್ಮಸ್ಥಳದಲ್ಲಿ ಶವಗಳನ್ನು ಹೂತಿಟ್ಟಿರುವುದಾಗಿ ಮಾಸ್ಕ್ ಮ್ಯಾನ್ ದೂರು ನೀಡಿದ್ದು, ಈ ಪ್ರಕರಣದ ಕುರಿತಾಗಿ ಜೈನ ಸಮಾಜದ ಬಗ್ಗೆ ಅವಹೇಳನಕಾರಿ ಕಾಮೆಂಟ್ ಹಾಕಿದ ಹಿನ್ನೆಲೆಯಲ್ಲಿ ಹೊಸಹಳ್ಳಿಯ ಉಮೇಶ್ ನನ್ನು ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಉಮೇಶ್ ಗೌಡ್ಲಾರ್ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಶ್ಲೀಲ ಕಾಮೆಂಟ್ ಹಾಕಲಾಗಿತ್ತು. ಜೈನ ಸಮಾಜದ ಹೆಣ್ಣು ಮಕ್ಕಳ ಕುರಿತು ಅಶ್ಲೀಲ ಕಾಮೆಂಟ್ ಹಾಕಲಾಗಿದ್ದು, ಈ ಬಗ್ಗೆ ಕಳಸ ಮೂಲದ ಪದ್ಮರಾಜಯ್ಯ ಅವರು ಉಮೇಶನ ವಿರುದ್ಧ ದೂರು ನೀಡಿದ್ದರು. ಅಜ್ಜಂಪುರ ಪೊಲೀಸ್ ಠಾಣೆಯಲ್ಲಿ ಉಮೇಶ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಪೊಲೀಸರು ಆರೋಪಿ ಉಮೇಶ್ ನನ್ನು ಬಂಧಿಸಿದ್ದಾರೆ.