ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಮತ್ತೆ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್ ಗೆ ಇಂದು ಫ್ಯಾಮಿಲಿ, ಫ್ರೆಂಡ್ಸ್ ಭೇಟಿಗೆ ಯಾವುದೇ ಅವಕಾಶವಿಲ್ಲ.
ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಐವರು ಆರೋಪಿಗಳು ಪರಪ್ಪನ ಅಗ್ರಹಾರ ಜೈಲು ಸೇರಿದ್ದು, ಈಗಗಲೇ ಆರೋಪಿಗಳಿಗೆ ಕೈದಿ ನಂಬರ್ ಕೂಡ ವಿತರಣೆ ಮಾಡಲಾಗಿದೆ. ಇಂದು ಆರೋಪಿಗಳಿಗೆ ಕುಟುಂಬ ಸದಸ್ಯರ ಭೇಟಿಗೆ ಅವಕಾಶವಿಲ್ಲ ಎಂದು ತಿಳಿದುಬಂದಿದೆ.
ಸ್ವಾತಂತ್ರ್ಯ ದಿನಾಚರಣೆ ಹಾಗೂ ಸರ್ಕಾರಿ ರಜೆ ಇರುವುದರಿಂದ ಆರೋಪಿಗಳಿಗೆ ಕುಟುಂಬ ಸದಸ್ಯರ, ಸ್ನೇಹಿತರ ಭೇಟಿಗೆ ಯಾವುದೇ ಅವಕಾಶವಿಲ್ಲ. ದರ್ಶನ್ ಹಾಗೂ ಪವಿತ್ರಾ ಗೌಡ ಕುಟುಂಬ ಸದಸ್ಯರು ನಾಳೆ ಜೈಲಿಗೆ ಬಂದು ಭೇಟಿಯಾಗುವ ಸಾಧ್ಯತೆ ಇದೆ.