ದೇವನಹಳ್ಳಿ: ವಿದ್ಯಾರ್ಥಿನಿಯೊಂದಿಗೆ ಪರಾರುಯಾಗಿದ್ದ ಪ್ರಾಧ್ಯಾಪಕನನ್ನು ದೇವನಹಳ್ಳಿ ಪೊಲೀಸರು ಬಂಧಿಸಿದ್ದಾರೆ.
ಪ್ರವೀಣ್ (45) ಬಂಧಿತ ಶಿಕ್ಷಕ. ಬೆಂಗಳೂರು ಗ್ರಾಮಾಂತರಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಕೊಂಗಾಡಿಯಪ್ಪ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕನಾಗಿದ್ದು, ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ಕಾಲೇಜಿನ ವಿದ್ಯಾರ್ಥಿನಿಯೊಂದಿಗೆ ಅಕ್ರಮ ಸಬಂಧ ಹೊಂದಿದ್ದ.
ವಿದ್ಯಾರ್ಥಿನಿಯ ಪೋಷಕರು ಆಕೆಗೆ ಮದುವೆ ನಿಶ್ಚಯ ಮಾಡಿದ್ದರು. ಈ ವಿಚಾರ ತಿಳಿದ ಪ್ರಾಧ್ಯಾಪಕ ಪ್ರವೀಣ್ ಆಗಸ್ಟ್ 2ರಂದು ವಿದ್ಯಾರ್ಥಿನಿ ಓಡಿಸಿಕೊಂಡು ಹೋಗಿದ್ದಾನೆ. ದೇವನಹಳ್ಳಿಯಿಂದ ದೆಹಲಿಗೆ ಹೋಗಿದ್ದ ಇಬ್ಬರೂ ಬಳಿಕ ನಂಜನಗೂಡಿಗೆ ವಾಪಸ್ ಆಗಿದ್ದಾರೆ. ಇಬ್ಬರೂ ನಂಜನಗೂಡಿನಲ್ಲಿ ಲಾಡ್ಜ್ ಒಂದರಲ್ಲಿ ರೂಮ್ ಬುಕ್ ಮಾಡಿ ತಂಗಿದ್ದರು.
ಇತ್ತ ಪ್ರವೀಣ್ ಪತ್ನಿ ಹಾಗೂ ಯುವತಿ ಪೋಷಕರು ದೊಡ್ಡಬಳ್ಳಾಪುರ ಠಾಣೆಯಲ್ಲಿ ದೂರು ನೀಡಿದ್ದರು. ಹುಡುಕಾಟ ನಡೆಸಿದ ಪೊಲೀಸರು ಪ್ರಾಧ್ಯಾಪಕನ್ನು ಬಂಧಿಸಿದ್ದಾರೆ.