ಶಿವಮೊಗ್ಗ : ಡೈರೆಕ್ಟೊರೇಟ್ ಜನರಲ್ ರಿಸೆಟ್ಲ್ಮೆಂಟ್ ಇವರಿಂದ ಸೇನಾ ಪಡೆಯ ನಿವೃತ್ತ ಅಧಿಕಾರಿಗಳು ಮತ್ತು ಮಾಜಿ ಸೈನಿಕರುಗಳಿಗೆ(ಜೆಸಿಒ/ಇತರೆ ರ್ಯಾಂಕ್) ವಿವಿಧ ಸರ್ಟಿಫಿಕೇಟ್ ಕೋರ್ಸ್ಗಳಿಗಾಗಿ ಅರ್ಜಿಯನ್ನು ಆಹ್ವಾನಿಸಲಾಗಿದೆ.
ಅರ್ಜಿದಾರರು 60 ವರ್ಷ ಒಳಗಿನವರಾಗಿರಬೇಕು. ನಿವೃತ್ತಿಯಾಗಿ ಮೂರು ವರ್ಷ ಮೀರಿರದ ನಿವೃತ್ತ ಅಧಿಕಾರಿಗಳು ಹಾಗೂ ಐದು ವರ್ಷ ಮೀರಿರದ ಮಾಜಿ ಸೈನಿಕರುಗಳಿಗೆ ಸರ್ಟಿಫಿಕೇಟ್ ಕೋರ್ಸಗಳಿಗೆ ಸೇರಲು ಅವಕಾಶವಿರುತ್ತದೆ. ನಿವೃತ್ತ ಅಧಿಕಾರಿಗಳಿಗೆ ಶೇಕಡ 60 ರಷ್ಟು ಶುಲ್ಕ ವಿನಾಯಿತಿಯಿದೆ. ಹಾಗೂ ಮಾಜಿ ಸೈನಿಕರುಗಳಿಗೆ(ಜೆಸಿಒ/ಇತರೆ ರ್ಯಾಂಕ್) ಯಾವುದೇ ಶುಲ್ಕವಿರುವುದಿಲ್ಲ.
ಈ ಅರ್ಹತೆಯನ್ನು ಹೊಂದಿರುವ ಮಾಜಿ ಸೇನಾ ಪಡೆಯ ಅಧಿಕಾರಿಗಳು ಹಾಗೂ ಮಾಜಿ ಸೈನಿಕ ಅಭ್ಯರ್ಥಿಗಳು ಅಗತ್ಯ ದಾಖಲೆಗಳೊಂದಿಗೆ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಶಿವಮೊಗ್ಗ ಇಲ್ಲಿ ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದು ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪ ನಿರ್ದೇಶಕ(ಪ್ರ) ಡಾ.ಸಿ.ಎ. ಹಿರೇಮಠ ತಿಳಿಸಿದ್ದಾರೆ.