ಹಳದಿ ಮಾರ್ಗ ಜನಸಂಚಾರಕ್ಕೆ ಲಭ್ಯವಾದ ನಂತರ ಒಂದೇ ದಿನ ನಮ್ಮ ಮೆಟ್ರೋದಲ್ಲಿ 10.48 ಲಕ್ಷ ಜನ ಪ್ರಯಾಣಿಸಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ನೇರಳೆ ಮಾರ್ಗದಲ್ಲಿ 4,51,816, ಹಸಿರು ಮಾರ್ಗದಲ್ಲಿ 2,91,677, ಹಳದಿ ಮಾರ್ಗದಲ್ಲಿ 52,215 ಹಾಗೂ ಇಂಟರ್‌ಚೇಂಜ್‌ನಲ್ಲಿ 2,52,323 ಜನರು ಪ್ರಯಾಣ ಬೆಳೆಸಿದ್ದು, ಈಗ ನಮ್ಮ ಮೆಟ್ರೋ ಬೆಂಗಳೂರಿಗರ ಸಂಚಾರ ಜೀವನಾಡಿಯಾಗಿ ಬದಲಾಗಿದೆ.
ಬೆಂಗಳೂರು ನಗರ ದೇಶದ ಐಟಿ, ಬಿಟಿ, ತಂತ್ರಜ್ಞಾನದ ತವರು. ಎಲೆಕ್ಟ್ರಾನಿಕ್ ಸಿಟಿ, ಸಿಲ್ಕ್ ಬೋರ್ಡ್, ಸಿಂಗಸಂದ್ರ, ಗೋವಿಂದಶೆಟ್ಟಿ ಪಾಳ್ಯ, ಕೋನಪ್ಪನ ಅಗ್ರಹಾರ ಮುಂತಾದ ಕಡೆಗಳಿಗೆ ಉದ್ಯೋಗ ನಿಮಿತ್ತ ನಿತ್ಯ ಸಂಚರಿಸುವ ಸಾಫ್ಟ್‌ವೇರ್ ಉದ್ಯೋಗಿಗಳಿಗೆ ಹಳದಿ ಮಾರ್ಗವು ಪ್ರಯಾಣದ ಅವಧಿ ತಗ್ಗಿಸಿ, ನೆಮ್ಮದಿಯ ನಿಟ್ಟುಸಿರು ಬಿಡುವಂತೆ ಮಾಡಿದೆ.
ಸಾರ್ವಜನಿಕರು ಹೆಚ್ಚೆಚ್ಚು ಮೆಟ್ರೋದಂತಹ ಸಮೂಹ ಸಾರಿಗೆಯನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಸಂಚಾರ ದಟ್ಟಣೆ ನಿವಾರಿಸುವ ನಮ್ಮ ಪ್ರಯತ್ನಕ್ಕೆ ಬೆಂಬಲವಾಗಿ ನಿಲ್ಲಬೇಕೆಂದು ಸಿಎಂ ಸಿದ್ಧರಾಮಯ್ಯ ಕೋರಿದ್ದಾರೆ.