ಧಾರವಾಡ: ಧಾರವಾಡ ಜಿಲ್ಲ ಅಪಂಚಾಯತ್ ಯೋಜನಾಧಿಕಾರಿ ರೇಖಾ ಡೊಳ್ಳಿನ ಅವರನ್ನು ಅಮಾನತು ಮಾಡಿ ಆದೆಶ ಹೊರಡಿಸಲಾಗಿದೆ.
ಕರ್ತವ್ಯ ಲೋಪ ಆರೋಪದಡಿ ರೇಖಾ ಅವರನ್ನು ಸಸ್ಪೆಂಡ್ ಮಾಡಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಮಟ್ಟದ ಅನುದಾನ ಪ್ರಸ್ತಾವನೆ ಸಲ್ಲಿಸುವಾಗ ಕಾನೂ ಉಲ್ಲಂಘನೆ ಮಾಡಿರುವ ಆರೋಪ ರೇಖಾ ವಿರುದ್ಧ ಕೇಳಿಬಂದಿದೆ.
ರಾಜೀವ್ ಗಾಂಧಿ ಚೈತನ್ಯ ಯೋಜನೆ ಅಡಿ ಗ್ರಾಮೀಣ ಜನರಿಗೆ ಕೌಶಲ್ಯ ಕೊಡುವ ಯೋಜನೆ ಇದ್ದು, 2017-18ರಲ್ಲಿ ಈ ಯೋಜನೆ ಕಾರ್ಯಕ್ರಮಕ್ಕೆ ಕೈಗೊಂದ ಅಭಿಯಾನದ ಪ್ರಸ್ತಾವನೆಯನ್ನು ಜಿಲ್ಲಾ ಪಂಚಾಯತಿ ಸಿಇಒ ಅವರ ನೇತೃತ್ವದಲ್ಲಿ ಸಚಿತಿಯನ್ನು ರಚನೆ ಮಾಡಿ ಆ ಬಳಿಕ ಸರ್ಕಾರಕ್ಕೆ ಸಲ್ಲಿಸಬೇಕಿತ್ತು. ಆದರೆ ರೇಖಾ ಅವರು ಈ ನಿಯಮ ಗಾಳಿಗೆ ತೂರಿ ಜಿಲ್ಲಾ ಪಂಚಾಯಿತಿ ಸಿಇಒ ಗೆ ಸಮಿತಿ ರಚನೆ ಬಗ್ಗೆ ಗಮನಕ್ಕೆ ತರದೇ ಸ್ಕ್ಯಾನ್ ಐಟಿ ಸೊಲ್ಯೂಷನ್ ಎಂಬ ಕಂಪನಿಗೆ ಈ ಅನುದಾನ ಬರುವಂತೆ ಮಾಡಿದ್ದರು. 3 ಕೋಟಿ 65 ಲಕ್ಷ 70 ಸಾವಿರ ಹಣ ಈ ಕಂಪನಿಗೆ ಹೋಗುವಂತೆ ಮಾಡಿದ್ದರು. ಈ ವಿಚಾರವನ್ನು ಜಿಲ್ಲಾ ಪಂಚಾಯಿತಿ ಸಿಇಒ ಗ್ರಾಮೀಣಾಭಿವೃದ್ಧಿ ಇಲಾಖೆ ಹಾಗೂ ಪಂಚಾಯತ್ ರಾಜ್ ಕಾರ್ಯದರ್ಶಿ ಗಮನಕ್ಕೆ ತಂದಿದ್ದು, ಇದೀಗ ರೇಖಾ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.