ಬೀದಿ ನಾಯಿಯಿಂದ ‘ಮಕ್ಕಳನ್ನು ರಕ್ಷಿಸಲು’ ಜರ್ಮನ್ ಶೆಫರ್ಡ್ ನಾಯಿಯೊಂದು ಬಾಲ್ಕನಿಯಿಂದ ಜಿಗಿದಿದ್ದು, ವಿಡಿಯೋ ಸಖತ್ ವೈರಲ್ ಆಗಿದೆ.
ಬೀದಿ ನಾಯಿಯಿಂದ ಮಕ್ಕಳನ್ನು ರಕ್ಷಿಸಿದ ಧೈರ್ಯಶಾಲಿ ಜರ್ಮನ್ ಶೆಫರ್ಡ್ ನಾಯಿಯ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲರ ಹೃದಯಗಳನ್ನು ಗೆದ್ದಿದೆ.
ಋಷಿಕೇಶದ ವಸತಿ ಪ್ರದೇಶದಿಂದ ಈ ಕ್ಲಿಪ್ ಬಂದಿದೆ. ನಿಷ್ಠಾವಂತ ಸಾಕುಪ್ರಾಣಿ ಬಾಲ್ಕನಿಂದ ಕೆಳಗೆ ಹಾರಿ ಮಕ್ಕಳನ್ನು ಸುರಕ್ಷಿತವಾಗಿಡಲು ಬೀದಿ ನಾಯಿಯನ್ನು ಓಡಿಸುವುದನ್ನು ತೋರಿಸುತ್ತದೆ. ಬೀದಿ ನಾಯಿ ಮಕ್ಕಳನ್ನು ಹಿಂಬಾಲಿಸಲು ಪ್ರಾರಂಭಿಸಿದಾ, ಎಚ್ಚರವಾದ ನಾಯಿ ತಕ್ಷಣವೇ ಗೋಡೆಯಿಂದ ಹಾರಿ ಅದನ್ನು ಹೆದರಿಸಿ ಓಡಿಸುತ್ತದೆ.
ವೀಡಿಯೊದ ನಿಖರವಾದ ಹಿನ್ನೆಲೆ ಮತ್ತು ಸತ್ಯಾಸತ್ಯತೆಯನ್ನು ಅಧಿಕೃತವಾಗಿ ಪರಿಶೀಲಿಸಲಾಗಿಲ್ಲ. “ಒಂದು ನಾಯಿ ಮತ್ತೊಂದು ನಾಯಿಯಿಂದ ಮಕ್ಕಳನ್ನು ರಕ್ಷಿಸಲು ಸೂಪರ್ ಹೀರೋನಂತೆ ಹಾರಿತು” ಎಂಬ ಶೀರ್ಷಿಕೆಯೊಂದಿಗೆ ಕ್ಲಿಪ್ ಅನ್ನು X (ಹಿಂದೆ ಟ್ವಿಟರ್) ನಲ್ಲಿ ಹಂಚಿಕೊಳ್ಳಲಾಗಿದೆ.
In Rishikesh, A dog jumped like a superhero to save children from another dog.
— Ghar Ke Kalesh (@gharkekalesh) August 9, 2025
pic.twitter.com/IwN1FUZgrN