ಕಲಬುರಗಿ: ಕಕ್ಷಿದಾರ ಮಹಿಳೆ ಮೇಲೆ ನಿರಂತರ ಅತ್ಯಾಚಾರ ಎಸಗಿದ ಆರೋಪದ ಮೇಲೆ ವಕೀಲನನ್ನು ಬಂಧಿಸಲಾಗಿದೆ. ಕಲಬುರಗಿ ನಗರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲಾಕ್ ಮೇಲ್ ಮಾಡುತ್ತಿದ್ದ ವಕೀಲ ಮಲ್ಲಿನಾಥ ನರೋಣಿ ನಿರಂತರ ಅತ್ಯಾಚಾರ ಎಸುಗುತ್ತಿದ್ದ ಎಂದು ಕಕ್ಷಿದಾರ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ವಕೀಲನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. ವಕೀಲನ ಪತ್ನಿ ಮತ್ತು ಪುತ್ರನ ವಿರುದ್ಧವೂ ಪ್ರಕರಣ ದಾಖಲಾಗಿದೆ.
ಸೋದರ ಮಾವನನ್ನು ಮದುವೆಯಾಗಿದ್ದ ಮಹಿಳೆ ಒಂದು ವರ್ಷದ ಬಳಿಕ ಕಲಹ ಉಂಟಾಗಿ ವಿಚ್ಛೇದನ ಕೇಸ್ ದಾಖಲಿಸಿದ್ದರು. ಮಲ್ಲಿನಾಥ ನರೋಣಿ ಮಹಿಳೆ ಪರ ವಕಾಲತ್ತು ವಹಿಸಿದ್ದರು. ಕೇಸಿನ ಬಗ್ಗೆ ಮಾತನಾಡಲು ಕರೆಸಿಕೊಂಡು ನಿರಂತರ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆಯ ಆರೋಪಿಸಿ ದೂರು ನೀಡಿದ್ದಾರೆ.