ಬೆಂಗಳೂರು: ಬೆಂಗಳೂರಿನಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಶಾಲಾ ಬಸ್ ಗೆ ಬೆಂಕಿ ತಗುಲಿ ಹೊತ್ತಿ ಉರಿದಿದೆ. ಬಸ್ ನಲ್ಲಿ ಸುಟ್ಟು ಕರಕಲಾದ ಶವ ಪತ್ತೆಯಾಗಿದೆ.
ಬಾಣಸವಾಡಿಯಲ್ಲಿ ಘಟನೆ ನಡೆದಿದೆ. ಬಾಣಸವಾಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮಾಹಿತಿ ತಿಳಿದ ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ.
ಬೆಂಗಳೂರಿನ ಬಾಣಸವಾಡಿಯಲ್ಲಿ ರಸ್ತೆ ಬದಿಯಲ್ಲಿ ನಾಲ್ಕು ತಿಂಗಳಿನಿಂದ ಶಾಲಾ ಬಸ್ ನಿಲ್ಲಿಸಲಾಗಿತ್ತು. ಇದು ಪಡ್ಡೆ ಹುಡುಗರ ಅಡ್ಡೆಯಾಗಿತ್ತು. ಎಣ್ಣೆ ಪಾರ್ಟಿ ಮಾಡಿ ಕೊಲೆ ಮಾಡಿ ನಂತರ ಬಸ್ ಗೆ ಬೆಂಕಿ ಹಚ್ಚಿರುವ ಶಂಕೆ ವ್ಯಕ್ತವಾಗಿದೆ. ಇಲ್ಲವೇ ಸಿಗರೇಟ್ ಸೇದಿ ಬಿಸಾಡಿದ್ದರಿಂದ ಬೆಂಕಿ ತಗುಲಿರಬಹುದೆಂದು ಹೇಳಲಾಗಿದೆ. ಇದೆ ಬಾಣಸವಾಡಿ ಅಗ್ನಿಶಾಮಕ ಕಚೇರಿ ಬಳಿ ಘಟನೆ ನಡೆದಿದೆ. ಪೊಲೀಸರು ಪರಿಶೀಲನೆ ನಡೆಸಿ ತನಿಖೆ ಕೈಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.