ಲಕ್ನೋ : ಆಘಾತಕಾರಿ ಘಟನೆಯೊಂದರಲ್ಲಿ, ಮದ್ಯದ ಅಮಲಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಿ ಮಹಿಳೆಯೊಬ್ಬರು ತನ್ನ ಮಗನನ್ನು ಕೊಂದಿದ್ದಾರೆ. ಈ ಘಟನೆ ಆಗಸ್ಟ್ 7 ರಂದು ಉತ್ತರ ಪ್ರದೇಶದ ಶ್ಯಾಮಿವಾಲಾ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ಅಶೋಕ್ (32) ಎಂದು ಗುರುತಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನ 56 ವರ್ಷದ ತಾಯಿಯನ್ನು ಬಂಧಿಸಿದ್ದಾರೆ. ತಾಯಿ ಪೊಲೀಸರಿಗೆ ನೀಡಿದ ಹೇಳಿಕೆಯ ಪ್ರಕಾರ, ಆಗಾಗ್ಗೆ ಮನೆಗೆ ಕುಡಿದು ಬರುತ್ತಿದ್ದ ಅಶೋಕ್, ಆಕೆಯ ಮೇಲೆ ಹಲವು ಬಾರಿ ಅತ್ಯಾಚಾರ ಎಸಗಿದ್ದ. ಒಂದು ದಿನ ಮಗನಿಂದ ತಪ್ಪಿಸಿಕೊಳ್ಳಲು ಅವಳು ಅವನ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದಳು. ಗಂಭೀರವಾಗಿ ಗಾಯಗೊಂಡಿದ್ದ ಅಶೋಕ್ ಮೃತಪಟ್ಟಿದ್ದನು. ನಂತರ ತಾಯಿ ತನ್ನ ಮಗನನ್ನು ಅಪರಿಚಿತ ವ್ಯಕ್ತಿಯೊಬ್ಬರು ಕೊಂದಿದ್ದಾರೆ ಎಂದು ಇತರರಿಗೆ ತಿಳಿಸಿದ್ದರು. ಸ್ಥಳೀಯರು ಮನೆಗೆ ಬಂದಾಗ ಹಾಸಿಗೆಯ ಮೇಲೆ ಮೃತನಾಗಿ ಬಿದ್ದಿದ್ದ ಅಶೋಕ್ ನನ್ನು ಕಂಡು ಪೊಲೀಸರಿಗೆ ದೂರು ನೀಡಿದರು.
ವಿಚಾರಣೆಯ ಸಮಯದಲ್ಲಿ, ಪೊಲೀಸರಿಗೆ ಅನುಮಾನ ಬಂದು ಹೆಚ್ಚಿನ ವಿಚಾರಣೆ ನಡೆಸಿದಾಗ ತಾಯಿ ತನ್ನ ಅಪರಾಧವನ್ನು ಒಪ್ಪಿಕೊಂಡಳು.