ಬೆಂಗಳೂರು: ವಿಧಾನಮಂಡಲ ಮುಂಗಾರು ಅಧಿವೇಶನದ ಮೊದಲ ದಿನವೇ ಸಹಕಾರ ಸಚಿವ ಕೆ.ಎನ್.ರಾಜಣ್ಣ ರಾಜೀನಾಮೆ ವಿಚಾರ ಕಲಾಪದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ.
ರಾಜಣ್ಣ ರಾಜೀನಾಮೆ ಸುದ್ದಿ ನಡುವೆಯೇ ವಿಧಾನಸಭಾ ಕಲಾಪದಲ್ಲಿ ಭಾಗಿಯಾಗಿದ್ದು, ತೀವ್ರ ಕುತೂಹಲ ಮೂಡಿಸಿದೆ. ಈ ವೇಳೆ ವಿಪಕ್ಷ ನಾಯಕರು ರಾಜಣ್ಣ ರಾಜೀನಾಮೆ ನೀಡಿದ ಮೇಲೂ ಕಲಾಪದಲ್ಲಿ ಭಾಗಿಯಾಗಿರುವುದಕ್ಕೆ ಸ್ಪಷ್ಟನೆ ನೀಡುವಂತೆ ಒತ್ತಾಯಿಸಿದರು.
ಮಧ್ಯಾಹ್ನದ ಕಲಾಪದ ವೇಳೆ ವಿಪಕ್ಷ ನಾಯಕ ಆರ್.ಅಶೋಕ್ ರಾಜಣ್ಣ ರಾಜೀನಾಮೆ ವಿಷಯ ಪ್ರಸ್ತಾಪಿಸಿದ್ದು, ರಾಜಣ್ಣ ಎರಡು ಗಂಟೆ ಹಿಂದೆ ರಾಜೀನಾಮೆ ನೀಡಿದಾರೆ ಎಂದು ಸುದ್ದಿಯಾಗಿದೆ. ಅವರು ಸಚುವರಾಗಿ ಕಲಾಪಕ್ಕೆ ಹಾಜರಾಗಿದ್ದಾರಾ? ಅಥವಾ ಶಾಸಕರಾಗಿ ಕಲಾಪದಲ್ಲಿ ಪಲ್ಗೊಂಡಿದ್ದಾರಾ? ಎಂಬುದನ್ನು ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು. ಇದಕ್ಕೆ ವಿಪಕ್ಷಗಳ ಇತರ ನಾಯಕರೂ ದ್ವನಿಗೂಡಿಸಿದ್ದು, ಕಲಾದಲ್ಲಿ ವಿಪಕ್ಷ-ಆಡಳಿತ ಪಕ್ಷಗಳ ನಡುವೆ ವಾಗ್ವಾದಕ್ಕೆ ಕಾರಣವಾಗಿದೆ.