SHOCKING : ಬಂಡೀಪುರದಲ್ಲಿ ‘ಸೆಲ್ಪಿ’ ಕ್ಲಿಕ್ಕಿಸಿಕೊಳ್ಳಲು ಬಂದ ಪ್ರವಾಸಿಗನನ್ನು ಅಟ್ಟಾಡಿಸಿ ತುಳಿದ ಕಾಡಾನೆ : ಭಯಾನಕ ವೀಡಿಯೋ ವೈರಲ್ |WATCH VIDEO

ಬಂಡೀಪುರದಲ್ಲಿ ‘ಸೆಲ್ಪಿ’ ಕ್ಲಿಕ್ಕಿಸಿಕೊಳ್ಳಲು ಬಂದ ಪ್ರವಾಸಿಗನನ್ನು ಕಾಡಾನೆಯೊಂದು ಅಟ್ಟಾಡಿಸಿ ತುಳಿದಿದ್ದು ಘಟನೆಯ ಭಯಾನಕ ವೀಡಿಯೋ ವೈರಲ್ ಆಗಿದೆ. ಅದೃಷ್ಟವಶಾತ್ ಪ್ರವಾಸಿಗ ಪ್ರಾಣಾಪಾಯದಿಂದ ಬದುಕುಳಿದಿದ್ದಾನೆ.

ಕರ್ನಾಟಕದ ಬಂಡೀಪುರ ಹುಲಿ ಅಭಯಾರಣ್ಯದಲ್ಲಿ ಕೇರಳದ ಪ್ರವಾಸಿಗನೊಬ್ಬನ ಮೇಲೆ ಕಾಡು ಆನೆ ದಾಳಿ ನಡೆಸಿದ್ದು, ಆನೆ ಆತನನ್ನು ನೆಲಕ್ಕೆ ತಳ್ಳಿದೆ. ಆನೆಯ ಕಾಲಿನ ಕೆಳಗೆ ಆತ ಸಿಲುಕಿಕೊಂಡಿದ್ದಾನೆ. ಆದರೆ ಆನೆ ನಿಧಾನವಾಗಿ ಆತನ ಮೇಲೆ ಕಾಲು ಇರಿಸಿದ್ದು, ಆತ ಬದುಕುಳಿದಿದ್ದಾನೆ.

ವಾಹನಗಳು ಮತ್ತು ಜನರಿಂದ ತುಂಬಿದ್ದ ರಸ್ತೆಯಲ್ಲಿ ನಿಂತಿದ್ದ ಆನೆ ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪ್ರವಾಸಿಗರ ಮೇಲೆ ಇದ್ದಕ್ಕಿದ್ದಂತೆ ಆನೆ ದಾಳಿ ನಡೆಸಿದೆ. ಕಾಡು ಆನೆಯನ್ನು ಕಂಡ ಆ ವ್ಯಕ್ತಿ ಪ್ರಾಣ ಉಳಿಸಿಕೊಳ್ಳಲು ಓಡುತ್ತಿರುವುದು ಕಂಡುಬರುತ್ತದೆ. ಸ್ವಲ್ಪ ಹೊತ್ತು ಬೆನ್ನಟ್ಟಿದ ನಂತರ, ಆ ವ್ಯಕ್ತಿ ಎಡವಿ ಬಿದ್ದನು, ಆ ಸಮಯದಲ್ಲಿ ಆನೆ ಅವನ ಮೇಲೆ ಕಾಲಿಟ್ಟಿತು.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read