ಬೆಂಗಳೂರು : ಕಾಂತಾರ ಚಾಪ್ಟರ್ 1 ಬಹಳ ನಿರೀಕ್ಷೆ ಮೂಡಿಸಿದ ಸಿನಿಮಾ. ಈ ಸಿನಿಮಾ ಅಕ್ಟೋಬರ್ 2 ರಂದು ತೆರೆಗೆ ಬರಲಿದೆ. ಸದ್ಯ ಸಿನಿಮಾದ ಅಪ್ ಡೇಟ್ ಅಂದರೆ ಈ ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ರುಕ್ಮಿಣಿ ವಸಂತ್ ಜೋಡಿಯಾಗಿದ್ದು, ಕನಕವತಿ ಪೋಸ್ಟರ್ ರಿಲೀಸ್ ಆಗಿದೆ.
ಹೌದು, ವರಮಹಾಲಕ್ಷ್ಮೀ ಹಬ್ಬದ ವ್ರತದ ದಿನವೇ ಕನಕವತಿ ಪೋಸ್ಟರ್ ರಿಲೀಸ್ ಆಗಿದೆ. ಕಾಂತಾರ-1 ಚಿತ್ರದಲ್ಲಿ ರಿಷಬ್ ಶೆಟ್ಟಿಗೆ ನಾಯಕಿಯಾಗಿ ರುಕ್ಮಿಣಿ ವಸಂತ್ ನಟಿಸುತ್ತಿದ್ದು, ಸದ್ಯ ಚಿತ್ರತಂಡ ಕನಕವತಿ ಪೋಸ್ಟರ್ ರಿಲೀಸ್ ಮಾಡಿದೆ.
ಕಾಂತಾರ Chapter-1 ಕನಕವತಿಯ ಪರಿಚಯ ನಿಮ್ಮ ಮುಂದೆ… Introducing @rukminitweetsas ‘KANAKAVATHI’ from the world of #KantaraChapter1 ಎಂದು ನಟ ರಿಷಬ್ ಶೆಟ್ಟಿ ಪೋಸ್ಟ್ ಹಂಚಿಕೊಂಡಿದ್ದಾರೆ.
ನಟ ರಿಷಬ್ ಶೆಟ್ಟಿ ಅವರ ಬಹು ನಿರೀಕ್ಷಿತ ‘ಕಾಂತಾರ ಅಧ್ಯಾಯ 1’ ಚಿತ್ರ 2025 ರ ದಸರಾ ಸಮಯದಲ್ಲಿ ಬಿಡುಗಡೆಯಾಗಲಿದೆ.ಅ. 2 ರಂದು ಏಳು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದ್ದು, ಸಿನಿಮಾ ಸಿಕ್ಕಾಪಟ್ಟೆ ನಿರೀಕ್ಷೆ ಮೂಡಿಸಿದೆ. ‘ಕಾಂತಾರ’ ಬಹು ಭಾಷೆಗಳಲ್ಲಿ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತ್ತು. ರಿಷಬ್ ಶೆಟ್ಟಿಗೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟಿದೆ. ಇದೀಗ ಕಾಂತಾರ ಚಾಪ್ಟರ್ 1 ತೆರೆ ಮೇಲೆ ಬರಲು ಸಜ್ಜಾಗುತ್ತಿದೆ. ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಇಂಗ್ಲೀಷ್ ಹಾಗೂ ಬೆಂಗಾಲಿ ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.
#ಕಾಂತಾರ Chapter-1 ಕನಕವತಿಯ ಪರಿಚಯ ನಿಮ್ಮ ಮುಂದೆ…
— Rishab Shetty (@shetty_rishab) August 8, 2025
Introducing @rukminitweets as ‘KANAKAVATHI’ from the world of #KantaraChapter1.
In Cinemas #KantaraChapter1onOct2 🔥#Kantara @hombalefilms @KantaraFilm @shetty_rishab @VKiragandur @ChaluveG #ArvindKashyap @AJANEESHB… pic.twitter.com/irB9Lg4Qk7