ಕಲಬುರಗಿ: ಕುಡಿತದ ಚಟ ಬಿಡಲು ನಾಟಿ ಔಷಧಿ ಸೇವಿಸಿದ್ದ ಮತ್ತೋರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಇಮಡಾಪುರದಲಿ ಈ ಘಟನೆ ನಡೆದಿದೆ.
ಇಮಡಾಪುರದಲ್ಲಿ ನಿನ್ನೆ ಔಷಧಿ ಸೇವಿಸಿದ್ದ ಮನೋಹರ್ (30) ಮೃತಪಟ್ಟಿದ್ದಾರೆ. ಚಿತ್ತಾಪುರ ತಾಲೂಕಿನ ಭೀಮನಹಳ್ಳಿ ತಾಂಡಾದ ಮನೋಹರ್ ಮೃತ ದುರ್ದೈವಿ. ಈ ಮೂಲಕ ನಾಟಿ ಔಷಧಿ ಸೇವಿಸಿ ಸಾವನ್ನಪ್ಪಿದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ತಾಯಪ್ಪ ಅಲಿಯಾಸ್ ಫಕೀರಪ್ಪ ಮುತ್ಯಾನ ಬಳಿ ಕುಡಿತದ ಚಟ ಬಿಡಲೆಂದು ನಾಟಿ ಔಷಧಿ ಸೇವಿಸಿದ್ದರು. ಔಷಧಿ ಸೇವಿಸಿದ್ದ ನಾಲ್ವರು ಸಾವನ್ನಪ್ಪಿದ್ದಾರೆ.