ವಿಜಯಪುರ: ವಿಜಯಪುರದಲ್ಲಿ 9ನೇ ತರಗತಿ ವಿದ್ಯಾರ್ಥಿಗಳಿಂದ ಹಲ್ಲೆಗೊಳಗಾಗಿದ್ದ ಬಾಲಕ ಅನ್ಸ್(11) ಮೃತಪಟ್ಟಿದ್ದಾನೆ.
ಐದನೇ ತರಗತಿ ವಿದ್ಯಾರ್ಥಿ ಅನ್ಸ್ ಮೃತಪಟ್ಟ ಬಾಲಕ ಎಂದು ಹೇಳಲಾಗಿದೆ. ವಿಜಯಪುರದ ಯೋಗಾಪುರ ಗ್ರಾಮದಲ್ಲಿರುವ ಶಾಲೆಯಲ್ಲಿ ಘಟನೆ ನಡೆದಿದೆ.
ಶಾಲೆಯವರೇ ಇದಕೆಲ್ಲ ನೇರ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಬಿಹಾರ ಮೂಲದ ಬಾಲಕ ಅನ್ಸ್ ಶವ ಇಟ್ಟು ಶಾಲೆಯ ಎದುರು ಪ್ರತಿಭಟನೆ ನಡೆಸಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.