ಶಿವಮೊಗ್ಗ: ಶಿವಮೊಗ್ಗದಲ್ಲಿ ತುಂಗಾ ನದಿ ಸೇತುವೆ ಮೇಲೆ ಆರು ಬೋಗಿಗಳು ರೈಲಿನಿಂದ ಬೇರ್ಪಟ್ಟ ಘಟನೆ ನಡೆದಿದೆ. ಅದೃಷ್ಟವಶಾತ್ ಸಂಭವಿಸಬಹುದಾಗಿದ್ದ ಭಾರೀ ರೈಲು ದುರಂತ ತಪ್ಪಿದೆ.
ಹೊಳೆ ಬಸ್ ನಿಲ್ದಾಣ ಸಮೀಪ ಘಟನೆ ನಡೆದಿದೆ. ತಾಳಗುಪ್ಪ-ಮೈಸೂರು ರೈಲು ತುಂಗಾ ನದಿ ಸೇತುವೆ ಮೇಲೆ ಸಂಚರಿಸುವ ವೇಳೆಯಲ್ಲೇ 6 ಬೋಗಿಗಳು ಬೇರ್ಪಟ್ಟಿವೆ. 21 ಬೋಗಿಗಳ ರೈಲಿನ ಆರು ಬೋಗಿಗಳು ಬೇರ್ಪಟ್ಟಿದ್ದು ಸೇತುವೆ ಮೇಲೆ ನಿಂತಿವೆ.
ಕೂಡಲೇ ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ. ರೈಲು ಸ್ಥಳಕ್ಕೆ ಬಂದಿದ್ದು, ಬೋಗಿಗಳನ್ನು ಯಶಸ್ವಿಯಾಗಿ ಜೋಡಿಸಲಾಗಿದೆ. 45 ನಿಮಿಷಗಳ ಕಾಲ ಬೋಗಿಗಳು ಬೇರ್ಪಟ್ಟು ಆತಂಕ ಉಂಟಾಗಿತ್ತು.
