ಬೆಂಗಳೂರು : ‘ಧರ್ಮಸ್ಥಳ ಕೇಸ್’ ತನಿಖೆಗೆ GPR ಮತ್ತು ಆಧುನಿಕ ತಂತ್ರಜ್ಞಾನಗಳನ್ನು ಬಳಸಿ ಎಂದು ನಟ ಚೇತನ್ ಅಹಿಂಸಾ ಮನವಿ ಮಾಡಿದ್ದಾರೆ.
ಈ ಕುರಿತು ಫೇಸ್ ಬುಕ್ ನಲ್ಲಿ ಪೋಸ್ಟ್ ಹಂಚಿಕೊಂಡ ನಟ ಚೇತನ್ ಅಹಿಂಸಾ‘’ ಇದು ದೊಡ್ಡ ಸುದ್ದಿ — ಸ್ಥಳ 11ರ ಬಳಿಯಲ್ಲಿ ಅಸ್ತಿಪಂಜರ ಭಾಗಗಳು ಮತ್ತು ಸೀರೆ ಪತ್ತೆಯಾಗಿದೆ, ಇದು ಸ್ಥಳ 6ರಲ್ಲಿ ಸಿಕ್ಕಿರುವ ಮೂಳೆಗಳನ್ನು ಸಾಬೀತುಪಡಿಸುತ್ತದೆ.ಸತ್ಯವು ಸ್ವಚ್ಛತಾ ಕಾರ್ಮಿಕನ ಕಡೆ ಇದ್ದಂಗೆ ಕಾಣುತ್ತಿದೆ.ತಪಾಸಣೆಯು ಸಂಪೂರ್ಣವಾಗಿರಲು ಗ್ರೌಂಡ್ ಪೆನಿಟ್ರೇಟಿಂಗ್ ರಾಡಾರ್ (GPR) ಮತ್ತು ಇತರ ಆಧುನಿಕ ತಂತ್ರಜ್ಞಾನಗಳನ್ನು ಉಪಯೋಗಿಸಬೇಕೆಂದು ನಾವು ಮನವಿ ಮಾಡುತ್ತೇವೆ ಎಂದು ನಟ ಚೇತನ್ ಅಹಿಂಸಾ ಹೇಳಿದ್ದಾರೆ.
