ಡಿಜಿಟಲ್ ಡೆಸ್ಕ್ : 2025-26ನೇ ಸಾಲಿಗೆ ಅಲ್ಪಸಂಖ್ಯಾತರ ನಿರ್ದೇಶನಾಲಯದ ವತಿಯಿಂದ ಯುಪಿಎಸ್‍ಸಿ/ಕೆಎಎಸ್ ಗೆಜೆಟೆಡ್ ಪ್ರೊಬೇಷನರ್ ವಸತಿಯುತ ತರಬೇತಿಯನ್ನು ಬೆಂಗಳೂರಿನ ಹಜ್ ಭವನದಲ್ಲಿ ಹಾಗೂ ಕೆಪಿಎಸ್‍ಸಿ ಗ್ರೂಪ್-“ಸಿ”, RRB ಮತ್ತು ಎಸ್‍ಎಸ್‍ಸಿ ಪರೀಕ್ಷಾ ಪೂರ್ವ ತರಬೇತಿಯನ್ನು ಪ್ರತಿಷ್ಠಿತ ಸಂಸ್ಥೆಗಳ ಮೂಲಕ ನೀಡಲಾಗುತ್ತಿದ್ದು, ಈ ತರಬೇತಿಗೆ ಅರ್ಹ ಅಲ್ಪಸಂಖ್ಯಾತರ ಸಮುದಾಯದ ಅಭ್ಯಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು https://sevasindhu.karnataka.gov.in/…/DepartmentServices ಅಡಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹಾಗೂ ಆನ್‍ಲೈನ್‍ನಲ್ಲಿ ಅರ್ಜಿ ಭರ್ತಿ ಮಾಡಲು ವಿವರವಾದ ಸೂಚನೆಗಳು/ ವಿಧಾನಗಳು https://dom.karnataka.gov.in ನಲ್ಲಿ ಲಭ್ಯವಿದೆ.
ಅಭ್ಯರ್ಥಿಯು ಕರ್ನಾಟಕ ರಾಜ್ಯದ ನಿವಾಸಿಯಾಗಿರಬೇಕು. ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು. (ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ), ಅಭ್ಯರ್ಥಿಯು ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವ ವಿದ್ಯಾನಿಲಯದಿಂದ ಪದವಿ ಹೊಂದಿರಬೇಕು. ಅಭ್ಯರ್ಥಿಯ ವಯೋಮಿತಿ ಯುಪಿಎಸ್‍ಸಿ/ಕೆಎಎಸ್ ಗೆಜೆಟೆಡ್ ಪ್ರೊಬೇಷನರ್, ಕೆಪಿಎಸ್‍ಸಿ ಗ್ರೂಪ್-“ಸಿ” ತರಬೇತಿಗೆ ಕನಿಷ್ಠ 21 ಹಾಗೂ ಗರಿಷ್ಟ 35 ವರ್ಷಗಳು ಮತ್ತು ಆರ್‍ಆರ್‍ಬಿ ಮತ್ತು ಎಸ್‍ಎಸ್‍ಸಿ ತರಬೇತಿಗಳಿಗೆ ಕನಿಷ್ಠ 18 ಹಾಗೂ ಗರಿಷ್ಟ 30 ವರ್ಷಗಳು ಮೀರಿರಬಾರದು. (ಅರ್ಜಿ ಸಲ್ಲಿಸುವ ಅಂತಿಮ ದಿನಾಂಕದೊಳಗೆ), ಕೇಂದ್ರ ಮತ್ತು ರಾಜ್ಯ ಸರ್ಕಾರದ ನೌಕರಿಯಲ್ಲಿರುವ ಅಭ್ಯರ್ಥಿಗಳು ಅರ್ಹರಿರುವುದಿಲ್ಲ. ಹಿಂದಿನ ಸಾಲಿನಲ್ಲಿ ಐಎಎಸ್/ಕೆಎಎಸ್ ತರಬೇತಿ ಪಡೆದ ಅಭ್ಯರ್ಥಿಗಳು ಅರ್ಹರಿರುವುದಿಲ್ಲ.
ಅರ್ಜಿ ಸಲ್ಲಿಸಲು ಆಗಸ್ಟ್, 11 ರವರೆಗೆ ಅವಧಿ ವಿಸ್ತರಿಸಲಾಗಿದೆ. ಅಲ್ಪಸಂಖ್ಯಾತರ ಸಹಾಯವಾಣಿ ಸಂಖ್ಯೆ: 8277799990 ಇವರನ್ನು ಸಂಪರ್ಕಿಸಬಹುದು. ತಾಲ್ಲೂಕು ಮಾಹಿತಿ ಕೇಂದ್ರ ಸೋಮವಾರಪೇಟೆ ದೂ.ಸಂ. 8548068519, ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರ ಮೌಲಾನಾ ಆಜಾದ್ ಭವನ, ಎಫ್.ಎಂ.ಸಿ.ಕಾಲೇಜು ಹತ್ತಿರ, ಮಡಿಕೇ, ಕೊಡಗು ಜಿಲ್ಲೆ 9972799091 ಹಾಗೂ ತಾಲ್ಲೂಕು ಮಾಹಿತಿ ಕೇಂದ್ರ ವಿರಾಜಪೇಟೆ ದೂ.ಸಂ. 9900731037 ನ್ನು ಸಂಪರ್ಕಿಸಬಹುದು ಎಂದು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಆರ್.ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.