ಲಂಡನ್ ಓವಲ್ ನಲ್ಲಿ ನಡೆದ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಇಂಗ್ಲೆಂಡ್ ವಿರುದ್ಧ ಅದ್ಭುತವಾದ ಆರು ರನ್ಗಳ ಜಯ ಸಾಧಿಸಿದೆ.
ಈ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಟೀಂ ಇಂಡಿಯಾಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.
ಭಾರತ ಓವಲ್ ನಲ್ಲಿ ಅದ್ಭುತ ಟೆಸ್ಟ್ ಗೆಲುವು ಸಾಧಿಸಿದ ಟೀಂ ಇಂಡಿಯಾ ತಂಡಕ್ಕೆ ಅಭಿನಂದನೆಗಳು!
ನಮ್ಮ ಯುವ ತಂಡವು 5 ನೇ ಟೆಸ್ಟ್ ಗೆದ್ದು ಇಂಗ್ಲೆಂಡ್ನಲ್ಲಿ ಸರಣಿಯನ್ನು ಸಮಬಲಗೊಳಿಸಲು ಧೈರ್ಯ, ಕೌಶಲ್ಯ ಮತ್ತು ದೃಢಸಂಕಲ್ಪವನ್ನು ತೋರಿಸಿದೆ – ಇದು ನಿಜಕ್ಕೂ ಸ್ಮರಣೀಯ ಸಾಧನೆ.
ಕರ್ನಾಟಕದ ಕೆ.ಎಲ್. ರಾಹುಲ್ ಮತ್ತು ಕರುಣ್, ಪ್ರಸಿದ್ಧ್ ಕೃಷ್ಣ ಅವರ ಮಹತ್ವದ ಕೊಡುಗೆಗಳ ಬಗ್ಗೆ ಹೆಮ್ಮೆಯಿದೆ. ನೀವು ಪ್ರತಿಯೊಬ್ಬ ಕನ್ನಡಿಗನನ್ನು ಹೆಮ್ಮೆಪಡುವಂತೆ ಮಾಡಿದ್ದೀರಿ! ಎಂದು ಸಿಎಂ ತಿಳಿಸಿದ್ದಾರೆ.
Congratulations to #TeamIndia on a great Test win at The Oval!
— Siddaramaiah (@siddaramaiah) August 4, 2025
Our young team showed grit, skill and determination to win the 5th Test and level the series in England — a truly memorable achievement.
Proud of Karnataka’s own @klrahul , @karun126 and @prasidh43 for their vital… pic.twitter.com/4eaHbkINDZ