ಸ್ಯಾನ್ ಫ್ರಾನ್ಸಿಸ್ಕೋದಿಂದ ಮುಂಬೈಗೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ಕೆಲವು ಸಣ್ಣ ಜಿರಳೆಗಳು ಕಂಡುಬಂದಿವೆ ಎಂದು ವಿಮಾನಯಾನ ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
ಕೋಲ್ಕತ್ತಾದಲ್ಲಿ ನಿಲುಗಡೆ ಹೊಂದಿದ್ದ ವಿಮಾನದಲ್ಲಿದ್ದ ಇಬ್ಬರು ಪ್ರಯಾಣಿಕರು ಮೊದಲು ಸಣ್ಣ ಜಿರಳೆಗಳನ್ನು ಗಮನಿಸಿದರು. ನಂತರ ಇಬ್ಬರು ಪ್ರಯಾಣಿಕರನ್ನು ಬೇರೆ ಬೇರೆ ಆಸನಗಳಿಗೆ ಸ್ಥಳಾಂತರಿಸಲಾಯಿತು ಮತ್ತು ಕೋಲ್ಕತ್ತಾದಲ್ಲಿ ವಿಮಾನದ ಲೇಓವರ್ ಸಮಯದಲ್ಲಿ ಅದನ್ನು ಸ್ವಚ್ಛಗೊಳಿಸಲಾಯಿತು ಎಂದು ಸಂಸ್ಥೆ ಹೇಳಿಕೆಯಲ್ಲಿ ತಿಳಿಸಿದೆ.
“ಸ್ಯಾನ್ ಫ್ರಾನ್ಸಿಸ್ಕೋದಿಂದ ಕೋಲ್ಕತ್ತಾ ಮೂಲಕ ಮುಂಬೈಗೆ ಹಾರುತ್ತಿದ್ದ AI180 ವಿಮಾನದಲ್ಲಿ, ದುರದೃಷ್ಟವಶಾತ್ ಇಬ್ಬರು ಪ್ರಯಾಣಿಕರು ಕೆಲವು ಸಣ್ಣ ಜಿರಳೆಗಳನ್ನು ನೋಡಿ ತೊಂದರೆ ಅನುಭವಿಸಿದರು” ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
“ಆದ್ದರಿಂದ ನಮ್ಮ ಕ್ಯಾಬಿನ್ ಸಿಬ್ಬಂದಿ, ಇಬ್ಬರು ಪ್ರಯಾಣಿಕರನ್ನು ಅದೇ ಕ್ಯಾಬಿನ್ನಲ್ಲಿರುವ ಇತರ ಆಸನಗಳಿಗೆ ಸ್ಥಳಾಂತರಿಸಿದರು, “ಕೋಲ್ಕತ್ತಾದಲ್ಲಿ ವಿಮಾನದ ನಿಗದಿತ ಇಂಧನ ನಿಲುಗಡೆಯ ಸಮಯದಲ್ಲಿ, ನಮ್ಮ ಸಿಬ್ಬಂದಿ ತಕ್ಷಣವೇ ಶುಚಿಗೊಳಿಸುವ ಪ್ರಕ್ರಿಯೆಯನ್ನು ನಡೆಸಿದರು. ನಂತರ ಅದೇ ವಿಮಾನವು ಮುಂಬೈಗೆ ಸಮಯಕ್ಕೆ ಸರಿಯಾಗಿ ಹೊರಟಿತು” ಎಂದು ಅದು ಹೇಳಿದೆ.