BREAKING: ಅಧಿಕಾರ ಹಂಚಿಕೆ ಬಗ್ಗೆ ಮೌನ ಮುರಿದ ಡಿ.ಕೆ. ಶಿವಕುಮಾರ್ ಸ್ಪೋಟಕ ಹೇಳಿಕೆ: ರಾಜ್ಯ ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್ ಕ್ರಾಂತಿಗೆ ವೇದಿಕೆ ಸಜ್ಜು

ಬೆಂಗಳೂರು: ರಾಜ್ಯ ಕಾಂಗ್ರೆಸ್ ನಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮತ್ತೆ ಮೌನ ಮುರಿದ ಡಿಸಿಎಂ ಡಿ.ಕೆ. ಶಿವಕುಮಾರ್, ದೆಹಲಿ ಅಂಗಳದಲ್ಲಿ ಅಧಿಕಾರ ಹಂಚಿಕೆ ಬಗ್ಗೆ ಮಾತನಾಡಿದ್ದಾರೆ. ಈ ಮೂಲಕ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಟಾಂಗ್ ಕೊಟ್ಟಿದಾರೆ.

ಅವರ ಹೇಳಿಕೆ ರಾಜ್ಯ ಕಾಂಗ್ರೆಸ್ ನಲ್ಲಿ ಸೆಪ್ಟೆಂಬರ್ ಕ್ರಾಂತಿಗೆ ವೇದಿಕೆ ಸಜ್ಜಾದಂತಿದೆ.

ದೆಹಲಿಯಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ನಿಜವಾದ ನಾಯಕತ್ವ ಎಂದರೆ ಅಧಿಕಾರಕ್ಕಿಂತ ತ್ಯಾಗ ಮುಖ್ಯ ಎಂದು ಸೋನಿಯಾ ಗಾಂಧಿ ಅವರು ತೋರಿಸಿದರು. ಅವರು ನನ್ನಲ್ಲಿ ನಂಬಿಕೆ ಇಟ್ಟರು, ನನ್ನ ಬೆಂಬಲಕ್ಕೆ ನಿಂತರು ಮತ್ತು ಮುನ್ನಡೆಸುವ ಜವಾಬ್ದಾರಿಯನ್ನು ನನಗೆ ವಹಿಸಿದರು. ಅದಕ್ಕಾಗಿ ನನ್ನ ಹೃದಯವು ಕೃತಜ್ಞತೆ ಮತ್ತು ಗೌರವದಿಂದ ತುಂಬಿದೆ ಎಂದು ಹೇಳಿದ್ದಾರೆ.

ನಮ್ಮಲ್ಲಿ ಅಧಿಕಾರ ಹೊಂದಿಕೊಳ್ಳಲು ಕೆಲವರು ಒಪ್ಪುವುದಿಲ್ಲ. ಸೋನಿಯಾ ಗಾಂಧಿಯವರದು ದೊಡ್ಡ ತ್ಯಾಗ. ಯಾರಾದರೂ ಇಷ್ಟೊಂದು ತ್ಯಾಗ ಮಾಡಿದ್ದಾರೆಯೇ. ಇಂದು ಯಾರಾದರೂ ಸಣ್ಣ ಹುದ್ದೆಯನ್ನು ಬಿಟ್ಟು ಕೊಡುತ್ತಾರೆಯೇ? ಪಂಚಾಯತ್ ಮಟ್ಟದಲ್ಲಿಯೂ ಸಹ ಅನೇಕರು ತ್ಯಾಗ ಮಾಡುವುದಿಲ್ಲ. ಶಾಸಕರು, ಸಚಿವರು ಅಧಿಕಾರ ಹಂಚಿಕೊಳ್ಳುವುದಿಲ್ಲ. ನಮ್ಮಲ್ಲಿ ಕೆಲವರು ಅಧಿಕಾರ ಹಂಚಿಕೊಳ್ಳಲು ಒಪ್ಪುವುದಿಲ್ಲ. ನಾವು ಯಾವತ್ತಾದರೂ ಅಧಿಕಾರವನ್ನು ತ್ಯಾಗ ಮಾಡುತ್ತೇವೆಯೇ ಎಂದು ಸೋನಿಯಾ ಗಾಂಧಿಯವರ ಹೊಗಳುತ್ತಲೇ ಅಧಿಕಾರ ಹಂಚಿಕೆಯ ಬಗ್ಗೆ ಡಿಕೆ ಮಾತನಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read