ಭುವನೇಶ್ವರ: ರೈಲ್ವೆ ಹಳಿಯಲ್ಲಿ ಐಇಡಿ ಸ್ಫೋಟಗೊಂಡು ರೈಲ್ವೆ ಸಿಬ್ಬಂದಿಯೊಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಒಡಿಶಾ-ಜಾರ್ಖಂಡ್ ಗಡಿ ಬಳಿ ನಡೆದಿದೆ.
ಮೃತರನ್ನು ಇಟುವಾ ಓರಾಮ್ ಎಂದು ಗುರುತಿಸಲಾಗಿದೆ. ರೈಲ್ವೆ ಹಳಿಯಲ್ಲಿ ಮಾವೋವಾದಿಗಳು ಸುಧಾರಿತ ಐಇಡಿ ಹೂತಿಟ್ಟಿದ್ದರು. ಸ್ಫೋಟಗೊಂಡ ಪರಿಣಾಮ ರೈಲ್ವೆ ಸಿಬ್ಬಂದಿ ಇಟುವಾ ಓರಾಮ್ ಮೃತಪಟ್ಟಿದ್ದಾರೆ. ಸ್ಥಳದಲ್ಲಿ ಮಾವೋವಾದಿಗಳ ಪೋಸ್ಟರ್ ಪತ್ತೆಯಾಗಿದೆ. ಸುಂದರ್ ಗಢ ಜಿಲ್ಲೆಯ ಬಿಮ್ಲಾಗಢ ವಿಭಾಗದ ಕರಂಪಾಡ ಮತ್ತು ರೆಂಜ್ಡಾವನ್ನು ಸಂಪರ್ಕಿಸುವ ರೈಲ್ವೆ ಹಳಿಯಲ್ಲಿ ಈ ಘಟನೆ ನಡೆದಿದೆ.
ಘಟನೆಯಿಂದ ರೈಲು ಹಳಿಗಳಿಗೂ ಹಾನಿಯಾಗಿವೆ. ದುರಂತದಲ್ಲಿ ಮೃತಪಟ್ಟವರಿಗೆ ಒಡಿಶಾ ಸಿಎಂ ಮನೋಹರ್ ಚರಣ್ ತೀವ್ರ ಸಂತಾಪ ಸೂಚಿದ್ದಾರೆ. ಮೃತರ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಿಸಿದ್ದಾರೆ.