ಶಿವಮೊಗ್ಗ: ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿಯೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಬಸವರಾಜ್ ಆತ್ಮಹತ್ಯೆಗೆ ಶರಣಾಗಿರುವ ಕೈದಿ. ಪತ್ನಿ ಕೊಂದ ಆರೋಪದಲ್ಲಿ ಜೈಲು ಸೇರಿದ್ದ ಬಸವರಾಜ್, ಕಾರಾಗೃಹದ ಶರಾವತಿ ವಿಭಾಗದ ಕೊಠಡಿ ಸಂಖ್ಯೆ ೪೨ರಲ್ಲಿ ಆತ್ಮಹತ್ಯೆಗೆ ಯತ್ನಿಸಿ ಗಂಭೀರ ಸ್ಥಿತಿ ತಲುಪಿದ್ದ.
ತಕ್ಷಣ ಆತನನನ್ನು ಜೈಲು ಸಿಬ್ಬಂದಿಗಳು ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲೇ ಆತನ ಸಾವನ್ನಪ್ಪಿದ್ದ. ಪತ್ನಿಯೊಂದಿಗೆ ಜಗಳವಾಡಿ ಆಕೆಯ ಕತ್ತು ಹಿಸುಕಿ ಕೊಂದ ಆರೋಪದಲ್ಲಿ ಬಸವರಾಜ್ ಜೈಲು ಸೇರಿದ್ದ. ಜೂನ್ 16ರಿಂದ ಕಾರಾಗೃಗದಲ್ಲಿ ವಿಚಾರಣಾಧೀನ ಕೈದಿಯಾಗಿದ್ದ. ಇದೀಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.