ಕೋಲಾರ: ವಿದ್ಯುತ್ ಉಪಕರಣ ಕಳ್ಳತನ ಪ್ರಕರಣಕ್ಕೆ ಸಬಂಧಿಸಿದಂತೆ ಬೆಸ್ಕಾಂ ನ ಮೂವರು ಇಂಜಿಯಿಯರ್ ಗಳ ವಿರುದ್ಧ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಸ್ಕಾಂ ಉಗ್ರಾಣ ಇಂಜಿನಿಯರ್ ಗಳಾದ ಕರಿಮುಲ್ಲಾ ಹುಸೇನಿ, ನಹೀದ್ ಪಾಅಷಾ, ಜನಾರ್ಧನ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಾಗಿದೆ. ಸಾಮಾಜಿಕ ಕಾರ್ಯಕರ್ತ ಕೆ.ಸಿ ರಾಜಣ್ಣ ನೀಡಿದ ದೂರಿನ ಹಿನ್ನೆಲೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಗೆ ಸೇರಿದ್ದ ವಿದ್ಯುತ್ ಪರಿಕರ ಕೋಲಾರ ಕಾರ್ಯನಿರ್ವಾಹಕ ಇಂಜಿನಿಯರ್ ವಿಭಾಗದಲ್ಲಿ ಕಳ್ಳತನವಾಗಿದ್ದು, 2.1 ಕೋಟಿಗೂ ಹೆಚ್ಚು ಮೌಲ್ಯದ ವಿದ್ಯುತ್ ಪರಿಕರ ಹಾಗೂ ಸಾಮಗ್ರಿಗಳು ಕಳ್ಳತನವಾಗಿವೆ.