ಶಿವಮೊಗ್ಗ: ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಕೈದಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ಜೈಲಿನ ಶರಾವತಿ ಬ್ಯಾರಕ್ ನ 42ನೇ ಕೊಠಡಿಯಲ್ಲಿ ಶನಿವಾರ ಶೌಚಾಲಯದ ಕಿಟಕಿಯ ಸರಳಿಗೆ ತನ್ನ ಲುಂಗಿಯಿಂದ ನೇಣು ಬಿಗಿದುಕೊಂಡು ಬಸವರಾಜ್(38) ಎಂಬಾತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಜೈಲಿನ ಸಿಬ್ಬಂದಿ ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಜೂನ್ 16ರಂದು ಶಿಕಾರಿಪುರ ಟೌನ್ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಪತ್ನಿ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಬಸವರಾಜನನ್ನು ನ್ಯಾಯಾಲಯ ವಿಚಾರಣಾ ಬಂಧಿಯಾಗಿ ಜೈಲಿಗೆ ಕಳುಹಿಸಿತ್ತು.