ಬೆಂಗಳೂರು: ರೋಗಿಗಳಿಗೆ ಮತ್ತಷ್ಟು ಉತ್ತಮ ಸೇವೆ ನೀಡುವ ಉದ್ದೇಶದಿಂದ ಜಿಲ್ಲಾಸ್ಪತ್ರೆಗಳಲ್ಲಿ ಸರ್ಕಾರದ ವತಿಯಿಂದಲೇ ಸಿಟಿ ಮತ್ತು ಎಂ.ಆರ್.ಐ. ಸ್ಕ್ಯಾನ್ ವ್ಯವಸ್ಥೆಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ವೆನ್ಲಾಕ್ ಜಿಲ್ಲಾಸ್ಪತ್ರೆಯ ಆರೋಗ್ಯ ರಕ್ಷಾ ಸಮಿತಿ ಮಹಾಸಭೆಯಲ್ಲಿ ಮಾತನಾಡಿದ ಅವರು, ವೆನ್ಲಾಕ್ ಆಸ್ಪತ್ರೆಯಲ್ಲಿ ನೂತನವಾಗಿ ಆರಂಭಿಸಿರುವ ಕ್ಯಾಥ್ ಲ್ಯಾಬ್ ಶೀಘ್ರ ಕಾರ್ಯ ಆರಂಭಿಸಲಿದೆ. ಇಲ್ಲಿ ಬಿಪಿಎಲ್ ಪಡಿತರ ಚೀಟಿದಾರರಿಗೆ ಆಂಜಿಯೋಪ್ಲಾಸ್ಟಿ ಮೂಲಕ ಸ್ಟಂಟ್ ಅಳವಡಿಕೆ ಸೇರಿದಂತೆ ಹೃದಯ ಶಸ್ತ್ರ ಚಿಕಿತ್ಸೆಗಳು ಉಚಿತವಾಗಿರುತ್ತವೆ. ಆಂಜಿಯೋಗ್ರಾಂಗೆ ನಿಯಮಗಳ ಪ್ರಕಾರ ಬಿಪಿಎಲ್ ಕಾರ್ಡ್ ನವರಿಗೆ 5 ಸಾವಿರ ರೂ. ಕನಿಷ್ಠ ದರ ನಿಗದಿಪಡಿಸಿದ್ದು, ಉಚಿತವಾಗಿ ಕಲ್ಪಿಸುವ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಹೃದಯಾಘಾತದ ಸಂದರ್ಭದಲ್ಲಿ ರೋಗಿಗೆ ಅಳವಡಿಸುವ ಸಿಂಗಲ್ ಸ್ಟಂಟ್ ಬೆಲೆ 60,000 ಇದ್ದು, ಎಪಿಎಲ್ ಕಾರ್ಡ್ ದಾರರಿಗೆ 42,000 ರೂ., ಡಬಲ್ ಸ್ಟಂಟ್ ಗೆ ನಿಗದಿತ ದರ 85,000 ರೂ ಬದಲಿಗೆ ಎಪಿಎಲ್ ನವರಿಗೆ 59,500 ರೂ., ಹೆಚ್ಚುವರಿ ಸ್ಟಂಟ್ ಗೆ ನಿಗದಿತ 28,849 ರೂ. ಆಗಿದ್ದು, 20,194 ರೂ. ಸೇರಿದಂತೆ ಆಂಜಿಯೋಗ್ರಾಂ ಹೊರತುಪಡಿಸಿ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆಗೆ ಎಪಿಎಲ್ ನವರಿಗೆ ಶೇಕಡ 30ರಷ್ಟು ವೆಚ್ಚವನ್ನು ಸರ್ಕಾರ ಭರಿಸುತ್ತದೆ