ಮಂಡ್ಯ: ನಟಿ ರಮ್ಯಾ ಅವರಿಗೆ ದರ್ಶನ್ ಅಭಿಮಾನಿಗಳ ಹೆಸರಲ್ಲಿ ಅಶ್ಲೀಲ ಕಮೆಂಟ್ ಹಿನ್ನೆಲೆಯಲ್ಲಿ ರಮ್ಯಾ ದೂರು ನೀಡಿರುವ ವಿಚಾರವಾಗಿ ಮಾಜಿ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯದಲ್ಲಿ ಮಾತನಾಡಿದ ಸುಮಲತಾ ಅಂಬರೀಶ್, ಹೆಣ್ಣು ಮಕ್ಕಳಿಗೆ ಕೆಟ್ಟ ರೀತಿಯ ಕಮೆಂಟ್ ಹಾಕಬಾರದು. ಈ ರೀತಿ ಮಾಡುವುದು ತಪ್ಪು ಎಂದು ಹೇಳಿದರು. ನಾನು ರಮ್ಯಾ ಅವರ ಸೋಷಿತ್ಯಲ್ ಮೀಡಿಯಾ ನೋಡಿಲ್ಲ. ಯಾವ ರೀತಿ ಕಮೆಂಟ್ ಯಾರು ಮಾಡಿದ್ದಾರೆ ಎಂದು ಗೊತ್ತಿಲ್ಲ. ಈ ಬಗ್ಗೆ ರಮ್ಯಾ ಪೊಲೀಸರುಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದರು.
ನನ್ನ ವಿರುದ್ಧವು ಇದೇ ರೀತಿ ಟ್ರೋಲ್ ಮಾಡಲಾಯ್ತು ಆಗ ಯಾರೂ ಆ ಬಗ್ಗೆ ಮಾತನಾಡಿಲ್ಲ. ನಮಗೆ ಶಕ್ತಿಯಿದೆ ನಾವು ಎದುರಿಸುತ್ತೇವೆ. ಅದರೆ ಯಾರೂ ಈ ರೀತಿ ಕಮೆಂಟ್ ಮಾಡಬಾರದು ಎಂದರು. ಇನ್ನು ದರ್ಶನ್ ಅಭಿಮಾನಿಗಲೇ ಕಮೆಂಟ್ ಮಾಡಿದ್ದಾರೆ ಎನ್ನಲು ಆಧಾರವಿಲ್ಲ. ದರ್ಶನ್ ಅಭಿಮಾನಿಗಳೇ ಮಾಡಿದ್ದರೆ ಮನವಿ ಮಾಡುತ್ತೇನೆ. ನಿಮ್ಮ ಕುಟುಂಬ, ಭವಿಷ್ಯವನ್ನು ಯೋಚಿಸಿ ಪೋಸ್ಟ್ ಮಾಡಿ ಎಂದು ಹೇಳಿದರು.