ಮಂಗಳೂರು: ಧರ್ಮಸ್ಥಳದಲ್ಲಿ ನೇತ್ರಾವತಿ ನದಿ ತೀರದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಸಂಬಂಧ ತನಿಖೆ ನಡೆಸುತ್ತಿರುವ ಎಸ್ ಐಟಿ ಅಧಿಕಾರಿಗಳ ತಂಡ 8ನೇ ಪಾಯಿಂಟ್ ನಲ್ಲಿ ಶೋಧಕಾರ್ಯವನ್ನು ಮುಕ್ತಾಯಗೊಳಿಸಿದೆ.
ನೂರಾರು ಶವಗಳನ್ನು ಹೂತಿಟ್ಟಿರುವುದಾಗಿ ದೂರುದಾರ ಒಟ್ಟು 13 ಸ್ಥಳಗಳ ಬಗ್ಗೆ ಹೇಳಿಕೆ ನೀಡಿದ್ದು, ಈ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ಅಸ್ಥಿಪಂಜರಗಳಿಗಾಗಿ ಒಂದೊಂದೇ ಸ್ಥಳಗಳಲ್ಲಿ ಶೋಶಕಾರ್ಯ ನಡೆಸಿದ್ದಾರೆ. ಈಗಾಗಲೇ 7 ಸ್ಥಳಗಳಲ್ಲಿ ಮಣ್ಣು ಅಗೆದು ಅಸ್ಥಿಪಂಜರಗಳಿಗಾಗಿ ಶೋಧ ನಡೆಸಲಾಗಿದೆ. 6ನೇ ಪಾಯಿಂಟ್ ನಲ್ಲಿ ಮಾತ್ರ ಇಡಿದಾದ ಅಸ್ಥಿಪಂಜರ ಪತ್ತೆಯಾಗಿದೆ. ಇಂದು 7ನೇ ಪಾಯಿಂಟ್ ನಲ್ಲಿ ಅಧಿಕಾರಿಗಳು ಶೋಧಕಾರ್ಯ ನಡೆಸಿದ್ದು, ಈ ವೇಳೆ ಕರವಸ್ತ್ರವೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
7ನೇ ಸ್ಥಳದಲ್ಲಿ ಶೋಧಕಾರ್ಯ ಮುಕ್ತಾಯಗೊಂಡ ಬಳಿಕ 8ನೇ ಪಾಯಿಂಟ್ ನಲ್ಲಿ ಮಿನಿ ಅರ್ಥ್ ಮೂವರ್ ಬಳಸಿ ಅಸ್ಥಿಪಂಜರಕ್ಕಾಗಿ ಶೋಧ ನಡೆಸಲಾಗಿದೆ. ಮಣ್ಣು ಅಗೆದರೂ ಯಾವುದೇ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ 8ನೇ ಪಾಯಿಂಟ್ ನಲ್ಲಿ ಶೋಧಕಾರ್ಯಾಚರಣೆ ಮುಕ್ತಾಯಗೊಂಡಿದೆ ಎಂದು ತಿಳಿದುಬಂದಿದೆ. ಇನ್ನು ಇಂದು ನಡೆದ ಶೋಧ ಕಾರ್ಯಾಚರಣೆ ವೇಳೆ ಸ್ಥಳದ ಸುತ್ತ ಕವರ್ ಮಾಡಿ ಗೌಪ್ಯತೆ ಕಾಪಾಡಿಕೊಂಡು ಶೋಧ ನಡೆಸಲಾಗಿದೆ. ಮುಂದಿನ ಸ್ಥಳದಲ್ಲಿ ಶೋಧ ನಡೆಸುವ ಬಗ್ಗೆ ಎಸ್ ಐಟಿ ಅಧಿಕಾರಿಗಳು ಚರ್ಚೆ ನಡೆಸಿದ್ದಾರೆ.