ಹೈದರಾಬಾದ್: 2018 ಹಾಗೂ 2024ರ ನಡುವೆ ವೈಎಸ್ ಆರ್ ಸಿಪಿ ಸರ್ಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎಸ್ ಐಟಿ ಹೈದರಾಬಾದ್ ಬಳಿಯ ತೋಟದ ಮನೆಯಿಂದ ಬರೋಬ್ಬರಿ 11 ಕೋಟಿ ನಗದು ಹಣ ಜಪ್ತಿ ಮಾಡಿದೆ.
3,500 ಕೋಟಿ ಮೊತ್ತದ ಅಬಕಾರಿ ಹಗರಣದ ತನಿಖೆ ನಡೆಸಿರುವ ಎಸ್ ಐಟಿ, ಹೈದರಾಬಾದ್ ಬಳಿತ ತೋಟದ ಮನೆಯಿಂದ 11 ಕೋಟಿ ನಗದು ಹಣ ವಶಕ್ಕೆ ಪಡೆದಿದೆ.
ಹಗರಣದ ಪ್ರಮುಖ ಆರೋಪಿ ವರುಣ್ ಪುರುಷೋತ್ತಮ್ ಎಂಬಾತ ತನ್ನ ಪಾತ್ರದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳು ತೋಟದ ಮನೆ ಮೇಲೆ ದಾಳಿ ನಡೆಸಿದ್ದು, ನಗದು ಹಣವನ್ನು ಜಪ್ತಿ ಮಾಡಿದೆ.
ಈ ಹಗರಣದಲ್ಲಿ ನಕಲಿ ಕಂಪನಿಗಳು, ಲಂಚ ಮತ್ತು ರಾಜಕೀಯ ನಾಯಕರ ಕೈವಾಡವಿದೆ. ಶೀಘ್ರದಲ್ಲಿಯೇ ಎಸ್ ಐಟಿ ಅಧಿಕಾರಿಗಳು ಕೆಲವರನ್ನು ಬಂಧಿಸಲಿದೆ ಎಂದು ವರದಿಯಾಗಿದೆ.