ಆಸ್ತಿ ಮಾಲೀಕರಿಗೆ ಗುಡ್ ನ್ಯೂಸ್: ಬಿ ಖಾತಾಗೆ ಎ ಖಾತಾ ನೀಡಲು ಆನ್ಲೈನ್ ವ್ಯವಸ್ಥೆ ಶೀಘ್ರ

ಬೆಂಗಳೂರು: ಬಿ ಖಾತಾ ಆಸ್ತಿ ಮಾಲೀಕರು ಎ ಖಾತಾ ಗೆ ಅರ್ಜಿ ಸಲ್ಲಿಸಲು ಅನುಕೂಲವಾಗುವಂತೆ ಮುಂದಿನ 15 ದಿನಗಳಲ್ಲಿ ಆನ್ಲೈನ್ ವ್ಯವಸ್ಥೆ ಆರಂಭಿಸುವುದಾಗಿ ಬಿಬಿಎಂಪಿ ತಿಳಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿನ ಸ್ವತ್ತುಗಳಿಗೆ ಎ ಖಾತಾ ನೀಡಲು ಸರ್ಕಾರ ಆದೇಶ ಹೊರಡಿಸಿದ್ದು, ಇದರ ಅನ್ವಯ ನಾಗರಿಕರು ಎ ಖಾತಾ ಗೆ ಅರ್ಜಿ ಸಲ್ಲಿಸಲು ಶೀಘ್ರ ಆನ್ಲೈನ್ ವ್ಯವಸ್ಥೆ ಜಾರಿಗೊಳಿಸಲಾಗುವುದು ಎಂದು ಪಾಲಿಕೆಯ ಮುಖ್ಯ ಆಯುಕ್ತ ಎಂ. ಮಹೇಶ್ವರರಾವ್ ತಿಳಿಸಿದ್ದಾರೆ.

ಸ್ವತ್ತುಗಳಿಗೆ ಎ ಮತ್ತು ಬಿ ಖಾತಾ ಎಂಬ ಪ್ರತ್ಯೇಕ ದಾಖಲೆ ವಿತರಣೆಯಿಂದ ಸಮಸ್ಯೆಯಾಗುತ್ತಿದ್ದು, ಇದನ್ನು ನಿವಾರಿಸಲು ಎಲ್ಲಾ ಸ್ವತ್ತುಗಳಿಗೆ ಸಮಾನ ಖಾತಾ ರೂಪದಲ್ಲಿಯೇ ಎ ಖಾತಾ ನೀಡಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಇದರ ಅನ್ವಯ ರಾಜ್ಯ ಸರ್ಕಾರ ಬಿ ಖಾತಾ ಆಸ್ತಿಗಳಿಗೆ ಎ ಖಾತಾ ನೀಡಲು ಆದೇಶಿಸಿ ಅಧಿಸೂಚನೆ ಹೊರಡಿಸಿದೆ. ಆನ್ಲೈನ್ ವ್ಯವಸ್ತೆ ಜಾರಿಯಾದ ನಂತರ ನಾಗರೀಕರು ಅರ್ಜಿ ಸಲ್ಲಿಸಬಹುದು. ಬಿ ಖಾತಾವನ್ನು ಎ ಖಾತಾಗೆ ಪರಿವರ್ತನೆ ಮಾಡಿಕೊಳ್ಳಲು ಹಾಗೂ ಯಾವುದೇ ಖಾತೆ ಹೊಂದಿಲ್ಲದವರು ಹೊಸ ಎ ಖಾತಾಗೆ ಅರ್ಜಿ ಸಲ್ಲಿಸಬಹುದು ಎಂದು ಹೇಳಲಾಗಿದೆ.

ಸಾರ್ವಜನಿಕರು ಎ ಖಾತಾಗಾಗಿ ಪಾಲಿಕೆಯ ಯಾವುದೇ ಕಚೇರಿಗೆ ಅಲೆಯಬೇಕಿಲ್ಲ, ಮಧ್ಯವರ್ತಿಗಳನ್ನು ಸಂಪರ್ಕಿಸಬಾರದು, ಲಂಚ ನೀಡಬಾರದು, ಶೀಘ್ರದಲ್ಲೇ ಆನ್ಲೈನ್ ವ್ಯವಸ್ಥೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.

ಬಿ ಖಾತಾ ಆಸ್ತಿಗಳನ್ನು ಎ ಖಾತಾವನ್ನಾಗಿ ಪರಿವರ್ತಿಸುವುದರಿಂದ ಸುಮಾರು 400 ರಿಂದ 700 ಕೋಟಿ ರೂ. ಹೆಚ್ಚುವರಿ ತೆರಿಗೆ ಸಂಗ್ರಹವಾಗುವ ನೀರಿಕ್ಷೆ ಇದೆ. ಮುಂದಿನ ಎರಡು ವಾರದಲ್ಲಿ ಎ ಖಾತಾ ವಿತರಣೆಗೆ ಎಸ್ಒಪಿ ಬಿಡುಗಡೆ ಮಾಡಲಾಗುವುದು. 7 ಲಕ್ಷ ಸ್ವತ್ತುಗಳು ತೆರಿಗೆಯಿಂದ ಹೊರಗಿದ್ದು ಇವುಗಳನ್ನು ತೆರೆಗೆ ವ್ಯವಸ್ಥೆಯಡಿ ತಂದರೆ ಅಧಿಕ ತೆರಿಗೆ ವಸೂಲಾಗಲಿದೆ ಎಂದು ಹೇಳಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read