ಹಾಸನ: ಜಿಲ್ಲಾಡಳಿತ ಹಾಸನ, ಜಿಲ್ಲಾ ಪಂಚಾಯತ್ ಹಾಸನ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಸನ ಮತ್ತು ಸಾರಿಗೆ ಇಲಾಖೆ ಹಾಸನ ಇವರುಗಳ ಸಹಯೋಗದಲ್ಲಿ ಹಾಸನ ಜಿಲ್ಲೆಯಲ್ಲಿನ ಎಲ್ಲಾ ವಾಹನ ಚಾಲಕರುಗಳಿಗೆ (ಆಟೋ ಚಾಲಕರು, ಗೂಡ್ಸ್ ವಾಹನ ಚಾಲಕರು, ಕ್ಯಾಬ್ ಚಾಲಕರು, ಲಾರಿ ಚಾಲಕರು, ಕೆ.ಎಸ್.ಆರ್.ಟಿ.ಸಿ, ಬಸ್ ಚಾಲಕರು, ಖಾಸಗಿ ಕಾಲೇಜು, ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಬಸ್ ಚಾಲಕರು, ಖಾಸಗಿ ಆಂಬುಲೆನ್ಸ್ ವಾಹನಗಳ ಚಾಲಕರುಗಳಿಗೆ) ಆ.1 ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಹಾಸನಾಂಬ ಕಲಾಕ್ಷೇತ್ರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ರಿಂದ 10 ಗಂಟೆಯವರೆಗೆ ಹೃದಯ ಜಾಗೃತಿ ಕಾರ್ಯಕ್ರಮ, ಒತ್ತಡ ನಿರ್ವಹಣೆ, ರಸ್ತೆ ಸುರಕ್ಷತೆ, ವ್ಯಸನಗಳ ದುಷ್ಪರಿಣಾಮಗಳ ಕುರಿತು ಉಪನ್ಯಾಸ ಕಾರ್ಯಕ್ರಮ ಆಯೋಜಿಸಲಾಗಿದೆ. ವಾಹನ ಚಾಲಕರುಗಳು ಸದರಿ ಬೃಹತ್ ಆರೋಗ್ಯ ತಪಾಸಣಾ ಶಿಬಿರಕ್ಕೆ ಹಾಜರಾಗಿ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.