BIG NEWS : ‘ರಾಜ್ಯ ಸರ್ಕಾರಿ’ ನೌಕರರೇ ಗಮನಿಸಿ : ಕುಟುಂಬ ಪಿಂಚಣಿ ಮಂಜೂರು ಬಗ್ಗೆ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : 80 ವರ್ಷಪೂರೈಸಿದ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರಿ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂబ ಪಿಂಚಣಿಯನ್ನು ಮಂಜೂರು ಮಾಡುವ ವಿಧಾನವನ್ನು ಸರಳೀಕೃತಗೊಳಿಸುವ ಬಗ್ಗೆ ಸರ್ಕಾರ ಮಹತ್ದದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಉಲ್ಲೇಖಿತ ಸರ್ಕಾರದ ಆದೇಶದಲ್ಲಿ 80 ವರ್ಷ ಪೂರೈಸಿದ ಮತ್ತು ಅದಕ್ಕೂ ಮೇಲ್ಪಟ್ಟ ವಯಸ್ಸನ್ನು ಪೂರ್ಣಗೊಳಿಸಿರುವ ರಾಜ್ಯ ಸರ್ಕಾರಿ ಕುಟುಂಬ ಪಿಂಚಣಿದಾರರಿಗೆ ಹೆಚ್ಚುವರಿ ಕುಟುಂಬ ಪಿಂಚಣಿಯನ್ನು ಮಂಜೂರು ಮಾಡಲು ಪಿಂಚಣಿ ಪಾವತಿ ಆದೇಶ(ಪಿ.ಪಿ.ಓ)ದಲ್ಲಿ ಜನ್ಮ ದಿನಾಂಕವು ಲಭ್ಯವಿಲ್ಲದಿದ್ದಲ್ಲಿ ಈ ಕೆಳಕಂಡಂತೆ ಕ್ರಮ ಕೈಗೊಳ್ಳಲು ಆದೇಶಿಸಿದೆ.

ನಿವೃತ್ತಿ ವೇತನ ಮತ್ತು ಕುಟುಂಬ ನಿವೃತ್ತಿ ವೇತನ ಜೊತೆಯಾಗಿ ಲಭ್ಯವಿರುವ ಪಿಂಚಣಿದಾರರ ಪ್ರಕರಣಗಳಲ್ಲಿ ಸಂದರ್ಭಾನುಸಾರ ದಿನಾಂಕ: 11-01-2019ರ ಆದೇಶದನ್ವಯ ಲಭ್ಯವಿರುವ ಹೆಚ್ಚುವರಿ ಪಿಂಚಣಿಯ ಸೌಲಭ್ಯವು ಜೀವಂತ ಸದಸ್ಯರ ಪರಿಷ್ಕೃತ ನಿವೃತ್ತಿ ವೇತನಕ್ಕೆ ಮಾತ್ರ ಸೀಮಿತಗೊಳಿಸತ್ಕದ್ದು.

ಕುಟುಂಬ ಪಿಂಚಣೀಯನ್ನು ಮಾತ್ರ ಪಡೆಯುತ್ತಿರುವ ಕುಟುಂಬ ಪಿಂಚಣಿದಾರರ ಜನ್ಮ ದಿನಾಂಕವು ಪಿಂಚಣಿ ಪಾವತಿ ಆದೇಶ (ಪಿಪಿಓ) ಲಭ್ಯವಿಲ್ಲದಿದ್ದಲ್ಲಿ, ಅವರು ಕುಟುಂಬ ಪಿಂಚಣಿ ಪಡೆಯುತ್ತಿರುವ ಸಾರ್ವಜನಿಕ ಬ್ಯಾಂಕ್ ಖಾತೆಗೆ ಸಂಬಂಧಿಸಿದಂತೆ ಬ್ಯಾಂಕುಗಳು ನಿರ್ವಹಿಸಿರುವ ಕೆ.ವೈ.ಸಿ ಯಲ್ಲಿ ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ: ಆಇ(ವಿ) 27 ಪಿಇಎನ್ 2007, ದಿನಾಂಕ: 06-01-2011ರಲ್ಲಿ ಸೂಚಿಸಿರುವ ದಾಖಲೆಗಳು ಲಭ್ಯವಿದ್ದಲ್ಲಿ, ಸದರಿ ದಾಖಲೆಗಳಲ್ಲಿ ಲಭ್ಯವಿರುವ ಜನ್ಮ ದಿನಾಂಕವನ್ನು ಪರಿಗಣಿಸಿ, ಸದರಿ ಮಾಹಿತಿಯನ್ನು ಖಜಾನೆಗಳಿಗೆ ನೀಡಲು ಬ್ಯಾಂಕುಗಳು ಕ್ರಮ ಕೈಗೊಳ್ಳುವುದು, ಖಜಾನೆಗಳು, ಖಜಾನೆ-2ರ ಪಿಂಚಣಿ ಡೇಟಾಬೇಸ್ನಲ್ಲಿ ಹಾಗೂ ಖಜಾನೆಗಳ ಕೆ.ಟಿ.ಸಿ ವಹಿ-45ರಲ್ಲಿ ವಿವರಗಳನ್ನು ದಾಖಲಿಸಿ ಮತ್ತು ದೃಢೀಕರಿಸಿ, ಮಾಹಿತಿಯನ್ನು ಮಹಾಲೇಖಪಾಲರಿಗೆ ನೀಡುವುದು. ) ಮೇಲ್ಕಂಡ(2)ರ ಅವಕಾಶ ಅನ್ವಯವಾಗದ ಪ್ರಕರಣಗಳಿಗೆ ಸಂಬಂಧಿಸಿದಂತೆ, ಖಜಾನೆಗಳು ದಿನಾಂಕ:06-01-2011ರ ಸರ್ಕಾರದ ಅಧಿಕೃತ ಜ್ಞಾಪನದಲ್ಲಿ ಸೂಚಿಸಿರುವ ವಿಧಾನವನ್ನು ಅನುಸರಿಸುವಂತೆ ತಿಳಿಸಿದೆ. ಉಲ್ಲೇಖಿತ ಸರ್ಕಾರದ ಆದೇಶದ ಪ್ರತಿಯನ್ನು ಈ ಸುತ್ತೋಲೆಯೊಂದಿಗೆ ಲಗತ್ತಿಸಿದ್ದು, ಸದರಿ ಸರ್ಕಾರದ ಆದೇಶದಂತೆ ಕ್ರಮವನ್ನು ಕೈಗೊಳ್ಳಲು ಕೋರಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read