ನವದೆಹಲಿ: ಉಗ್ರರು ಭಾರತ ಮೇಲೆ ದೊಡ್ಡ ಪ್ರಮಾಣದ ದಾಳಿಯನ್ನು ಆರಂಭಿಸಿದ್ದರು. ನಮ್ಮ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿದೆ. ನಮ್ಮ ರಕ್ಷಣೆಗಾಗಿ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಮಾತನಾಡಿದ ರಾಜನಾಥ್ ಸಿಂಗ್, ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ವೀರ ಯೋಧರಿಗೆ ನನ್ನ ನಮನ. ಭಯೋತ್ಪಾದಕರ ಮನೆಗಳಿಗೆ ನುಗ್ಗಿ ಹೊಡೆದಿದ್ದೇವೆ. ನಮ್ಮ ಸೇನೆ ಮೇ 6, 7ರಂದು ತನ್ನ ಶಕ್ತಿ ಪ್ರದರ್ಶಿಸಿದೆ. ಭಯೋತ್ಪಾದಕರ 9 ನೆಲೆಗಳ ಮೇಲೆ ನಮ್ಮ ಸೇನೆ ದಾಳಿ ನಡೆಸಿದೆ. ಕಾರ್ಯಾಚರಣೆಯ ವೇಳೆ 100 ಭಯೋತ್ಪಾದಕರನ್ನು ಸದೆಬಡಿಯಲಾಗಿದೆ ಎಂದು ಹೇಳಿದರು.
ಪಾಕಿಸ್ತಾನದ ಪ್ರತಿ ದಾಳಿಗೂ ನಾವು ಪ್ರತ್ಯುತ್ತರ ನೀಡಿದ್ದೇವೆ. ಪಾಕ್ ನಾಗರಿಕರಿಗೆ ಸನಸ್ಯೆ ಆಗದ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದ್ದೇವೆ. ಮೇ 10 ರಂದು ಪಾಕಿಸ್ತಾನ ಡ್ರೋನ್, ಕ್ಷಿಪಣಿ ಬಳಸಿ ದಾಳಿಗೆ ಯತ್ನಿಸಿದೆ. ಭಾರತದ ಮೇಲೆ ದೊಡ್ದ ಪ್ರಮಾಣದಲ್ಲಿ ದಾಳಿಗೆ ಯತ್ನಿಸಿತ್ತು. ನಮ್ಮ ಸೇನೆ ಪಾಕಿಸ್ತಾನದ ದಾಳಿ ಯತ್ನವನ್ನು ಧ್ವಂಸಗೊಳಿಸಿದೆ. ಭಾರತ ಯಾವತ್ತೂ ಬೇರೆಯವರ ಗಡಿ ಆಕ್ರಮಿಸಿಲ್ಲ. ನಮ್ಮ ಪ್ರತಿ ಯೋಧರೂ ಸಿಂಹಗಳಿದ್ದಂತೆ. ಸುದರ್ಶನ ಚಕ್ರವನ್ನು ಎತ್ತಿ ಹಿಡಿದ್ದಿದ್ದೇವೆ. ಪಾಕಿಸ್ತಾನದ ಉಗ್ರರಿಗೆ ತಕ್ಕ ಪಾಠ ಕಲಿಸಿದ್ದೇವೆ ಎಂಂದು ತಿಳಿಸಿದರು.