ಶಿವಮೊಗ್ಗ: ಶಿವಮೊಗ್ಗದ ಮೇಲಿನ ತುಂಗಾ ನಗರದಲ್ಲಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಅಣ್ಣನನ್ನೇ ಕೊಲೆ ಮಾಡಿದ್ದ ತಮ್ಮನನ್ನು ಪೊಲೀಸರು ಬಂಧಿಸಿದ್ದಾರೆ.
ಮಣಿಕಂಠ(38) ಕೊಲೆಯಾದ ವ್ಯಕ್ತಿ. ಆರೋಪಿ ಸಂತೋಷ್(31) ನನ್ನು ತುಂಗಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗಾರೆ ಕೆಲಸ ಮಾಡಿಕೊಂಡಿದ್ದ ಮಣಿಕಂಠ ಮತ್ತು ಸಂತೋಷನಿಗೆ ಮನೆಯ ಮಾಲೀಕತ್ವದ ವಿಚಾರವಾಗಿ ಜಗಳವಾಗಿತ್ತು.
ಸಂತೋಷನಿಗೆ ಮದುವೆಯಾಗಿದ್ದು, ಈ ಮನೆ ನನಗೆ ಸೇರಿದೆ. ನೀನು ಬರಬೇಡ ಎಂದು ಮಣಿಕಂಠ ಹೇಳಿದ್ದ ಎನ್ನಲಾಗಿದೆ. ಶನಿವಾರ ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದು, ಮಣಿಕಂಠ ಮಲಗಿದ್ದಾಗ ಗುದ್ದಲಿಯಿಂದ ಹೊಡೆದು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಸಂತೋಷ್ ಪರಾರಿಯಾಗಿದ್ದಾನೆ. ಭಾನುವಾರ ಘಟನೆ ನಡೆದ 24 ಗಂಟೆ ಒಳಗೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಂಗಾ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.