ಉಪನ್ಯಾಸಕರಿಗೆ ಗುಡ್ ನ್ಯೂಸ್: ಬಿ.ಇಡಿ ಮಾಡಲು ವೇತನ ಸಹಿತ ರಜೆ

ಬೆಂಗಳೂರು: ಅನುದಾನಿತ ಪದವಿ ಪೂರ್ವ ಕಾಲೇಜುಗಳ 364 ಉಪನ್ಯಾಸಕರಿಗೆ ವೇತನ ಸಹಿತ ಬಿ.ಇಡಿ ವ್ಯಾಸಂಗಕ್ಕೆ ತೆರಳಲು ಶಿಕ್ಷಣ ಇಲಾಖೆ ಅವಕಾಶ ನೀಡಿದೆ. ಇದುವರೆಗೆ ಬಿ.ಇಡಿ ವ್ಯಾಸಂಗ ಮಾಡದಿರುವ ಉಪನ್ಯಾಸಕರಿಗೆ ವಿಶೇಷ ಪ್ರಕರಣವೆಂದು ಪರಿಗಣಿಸಿ ವೇತನ ಸಹಿತ ಬಿ.ಇಡಿ ಶಿಕ್ಷಣಕ್ಕೆ ಕಳುಹಿಸಲು ತೀರ್ಮಾನ ಕೈಗೊಳ್ಳಲಾಗಿದೆ.

ಬಿ.ಇಡಿ ಓದಲು ತೆರಳುವ ಅವಧಿಯಲ್ಲಿ ಉಪನ್ಯಾಸಕರ ಸ್ಥಾನಗಳಿಗೆ ತಾತ್ಕಾಲಿಕವಾಗಿ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಂಡು ಕಾಯಂ ಉಪನ್ಯಾಸಕರ ವೇತನದಲ್ಲಿ ಗೌರವಧನ ಭರಿಸಲು ಷರತ್ತು ವಿಧಿಸಲಾಗಿದೆ. ಬಿ.ಇಡಿ ಶಿಕ್ಷಣವನ್ನು ಅಭ್ಯರ್ಥಿಗಳು ತಮ್ಮ ಸ್ವಂತ ವೆಚ್ಚದಲ್ಲಿ ಪೂರೈಸಿಕೊಳ್ಳಬೇಕು.

ಎರಡು ವರ್ಷ ಅಥವಾ ಬಿ.ಇಡಿ ವ್ಯಾಸಂಗ ಪೂರ್ಣಗೊಳ್ಳುವ ಅವಧಿ ಒಳಗೆ ಯಾವುದು ಮೊದಲು ಅದರೊಳಗೆ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ಸೇವೆಯಿಂದ ವಿಮುಕ್ತಿಗೊಳಿಸಲಾಗುವುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read