ಬೆಂಗಳೂರು: ಚುನಾವಣಾ ಅಕ್ರಮ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿಕೆಗೆ ವಿಪಕ್ಷ ನಾಯಕ ಆರ್. ಅಶೋಕ್ ಕಿಡಿಕಾರಿದ್ದು, ನಮಗೂ ಕಾಂಗ್ರೆಸ್ ಮೇಲೆ ಸಾಕಷ್ಟು ಅನುಮಾನಗಳಿವೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಲೋಕಸಭಾ ಚುನಾವಣೆಯಲ್ಲಿ ಚುನಾವಣಾ ಆಯೋಗದಿಂದ ಅಕ್ರಮ ನಡೆದಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ಇದಕ್ಕೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಬಲ ವ್ಯಕ್ತಪಡಿಸಿ ದ್ವನಿಗೂಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಆರೋಗಳಿಗೆ ಅರ್ಥವಿದೆಯೇ? ಎಂದು ಪ್ರಶ್ನಿಸಿದ್ದಾರೆ.
ಲೋಕಸಭಾ ಚುಅನವಣೆಯಲ್ಲಿ ಅಕ್ರಮ ಎಂದು ಆರೋಪಿಸುವುದಾದರೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ರೀತಿ ಬಗ್ಗೆಯೂ ನಮಗೂ ಅನುಮಾನವಿದೆ. ಕಾಂಗ್ರೆಸ್ ನವರು 136 ಸೀಟು ಹೇಗೆ ಗೆದ್ದರು? ಕಾಂಗ್ರೆಸ್ ನವರ ಯೋಗ್ಯತೆಗೆ ಗೆಲ್ಲೋಕೆ ಸಾಧ್ಯವಿಲ್ಲ. ಇವರೂ ಏನೋ ಬೋಗಸ್ ಮಾಡಿದ್ದಾರೆ ಅನ್ಸುತ್ತೆ. ಇಲ್ಲವಾದರೆ ಗೆಲ್ಲಲು ಹೇಗೆ ಸಾಧ್ಯ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ ನಡೆದು ಒಂದು ವರ್ಷದ ಬಳಿಕ ಈಗ ಚುನಾವಣಾ ಅಕ್ರಮ ವೋಟರ್ ಲಿಸ್ಟ್ ಕಳ್ಳಾಟ ಎಂದು ಆರೋಪಿಸುತ್ತಿದ್ದಾರೆ. ಇವರಿಗೆ ಅಸಮಾಧಾನವಿದ್ದರೆ ಈ ಹಿಂದೆಯೇ ಆಕ್ಷೇಪ ಸಲ್ಲಿಸಬಹುದಿತ್ತು. 90 ದಿನಗಳ ಕಾಲ ಅವಕಾಶವಿದ್ದಾಗಲೂ ಕೋರ್ಟ್ ಗೆ ಆಕ್ಷೇಪ ಯಾಕೆ ಸಲ್ಲಿಸಿಲ್ಲ. ಈಗ ಇಲ್ಲದಿರುವ ತಪ್ಪನ್ನು ಹುಡುಕಿ ಚುನಾವಣ ಆಯೋಗ ಸರಿಯಿಲ್ಲ, ವೋಟರ್ ಲಿಸ್ಟ್ ಸರಿಯಿಲ್ಲ ಎಂದು ಅನಗತ್ಯವಾಗಿ ಹಾದಿ ಬೀದಿ ರಂಪಾಟ ಮಾಡಿ ನಾಟವಾಡುತ್ತಿದ್ದಾರೆ.ಎಂದು ಕಿಡಿ ಕಾರಿದರು.