ಬೆಳಗಾವಿ : ಕುಡುಗೋಲಿನಿಂದ ಕತ್ತು ಕುಯ್ದುಕೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ತಾಲೂಕಿನ ಹೊನ್ನಿಹಾಳ ಗ್ರಾಮದಲ್ಲಿ ನಡೆದಿದೆ.
ನೀನು ಸತ್ರೆ ಅಕ್ಕ ಚೆನ್ನಾಗಿರ್ತಾಳೆ ಎಂದ ಬಾಮೈದನ ಮಾತಿಗೆ ಸಿಟ್ಟಾದ ಮಲ್ಲಪ್ಪ ಎಂಬ ವ್ಯಕ್ತಿ ತನ್ನ ಬಾಮೈದ, ಪತ್ನಿ ಎದುರೇ ಕತ್ತು ಸೀಳಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಲ್ಲಪ್ಪ ಹಾಗೂ ಪತ್ನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಈ ವಿಚಾರಕ್ಕೆ ಒಂದು ದಿನ ಬಾಮೈದ ಹಾಗೂ ಪತ್ನಿ ಜೊತೆ ಮಲ್ಲಪ್ಪ ಗಲಾಟೆ ಮಾಡಿಕೊಂಡಿದ್ದಾನೆ. ಆವೇಷದಲ್ಲಿ ಬಾಮೈದ ಮಲ್ಲಿಕಾರ್ಜುನ ನೀನು ಸತ್ರೆ ಅಕ್ಕ ಚೆನ್ನಾಗಿರ್ತಾಳೆ ಎಂದು ಹೇಳಿದ್ದಾನೆ. ಇದರಿಂದ ನೊಂದ ಮಲ್ಲಪ್ಪ ಕತ್ತು ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಸಂಬಂಧ ಮಾರಿಹಾಳ ಠಾಣೆಯಲ್ಲಿ ಮಲ್ಲಿಕಾರ್ಜುನ ವಿರುದ್ಧ ಕೇಸ್ ದಾಖಲಾಗಿದೆ.
You Might Also Like
TAGGED:ಆತ್ಮಹತ್ಯೆ