ಚಿಕ್ಕಮಗಳೂರು: ಬೀದಿನಾಯಿಗಳ ಹಾವಳಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಬೀದಿನಾಯಿಗಳಿಗೆ ಯಾರೂ ಊಟ ಹಾಕುವಂತಿಲ್ಲ, ಬೀದಿನಾಯಿಗಳಿಗೆ ಊಟ ಹಾಕುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ಬಸವರಾಜ್ ಎಚ್ಚರಿಕೆ ನೀಡಿದ್ದಾರೆ.
ಬೀದಿ ನಾಯಿಗಳಿಗೆ ರಸ್ತೆಯಲ್ಲಿ ಊಟ ಹಾಕಿದರೆ ಕೇಸ್ ಹಾಕಲಾಗುತ್ತದೆ. ರಸ್ತೆಗಳಲ್ಲಿ ಬೀದಿ ನಾಯಿಗಳಿಗೆ ಊಟ ಹಾಕುವುದರಿಂದಲೇ ಅವುಗಳು ಸಾರ್ವಜನಿಕರ ಮೇಲೆ ದಾಳಿ ನಡೆಸುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಈ ರೀತಿ ಮಾಡುವಂತಿಲ್ಲ. ಬೀದಿನಾಯಿಗಳಿಗೆ ಊಟ ಹಾಕುವಂತಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ಬೀದಿ ನಾಯಿಗಳಿಗೆ ಊಟ ಹಾಕಬೇಕು ಎಂದಾದರೆ ಮನೆಯ ಕಾಂಪೌಂಡ್ ಒಳಗೆ ಹಾಕಬೇಕು. ಬೀದಿನಾಯಿಗಳ ಸಂತಾನ ಹರಣ ಕ್ರಮಕ್ಕಾಗಿ ಟೆಂಡರ್ ನೀಡಲಾಗಿದೆ. ಇನ್ಮುಂದೆ ಯಾರೂ ಬೀದಿ ನಾಯಿಗಳಿಗೆ ರಸ್ತೆಗಳಲ್ಲಿ ಊಟ ಹಾಕುವಂತಿಲ್ಲ. ಹಾಕಿದರೆ ಅಂತವರ ಮೇಲೆ ಕೇಸ್ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.