ಶ್ರಾವಣ ಮಾಸ ಆರಂಭವಾಗಿದ್ದು, ಇದರೊಂದಿಗೆ ಹಬ್ಬಗಳ ಸಾಲು ಶುರುವಾಗಿದೆ. ಈ ವರ್ಷ ಏರುಗತಿಯಲ್ಲಿ ಸಾಗುತ್ತಿದ್ದ ತೆಂಗಿನ ಕಾಯಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಮೊದಲೇ ಬೆಲೆ ಏರಿಕೆಯಿಂದ ತತ್ತರಿಸಿದ್ದ ಗ್ರಾಹಕರಿಗೆ ತೆಂಗಿನ ಕಾಯಿ ದರ ಏರಿಕೆ ಬಿಸಿ ತಟ್ಟಿದೆ. ಕಳೆದ ವರ್ಷದಿಂದಲೂ ಇಳುವರಿ ಕುಂಠಿತವಾಗಿದ್ದರಿಂದ ತೆಂಗಿನ ಕಾಯಿಗೆ ಬೇಡಿಕೆ ಹೆಚ್ಚಾಗಿದೆ. ಆಷಾಢದಲ್ಲಿ ಕೊಂಚ ಕಡಿಮೆಯಾಗಿದ್ದ ತೆಂಗಿನ ಕಾಯಿ ದರ ಶ್ರಾವಣದಲ್ಲಿ ಕೆಜಿಗೆ 70 ರಿಂದ 75 ರ ವರೆಗೂ ತಲುಪಬಹುದು ಎಂದು ಹೇಳಲಾಗಿದೆ.
ಮಾರುಕಟ್ಟೆಯಲ್ಲಿ ಪ್ರಸ್ತುತ ಕೇಜಿಗೆ 50-55 ರೂ., 62 ರಿಂದ 65 ರೂ. ದರ ಇದ್ದು, ಹಬ್ಬಗಳ ಸಾಲು ಶುರುವಾಗುತ್ತಿದ್ದಂತೆ ತೆಂಗಿನಕಾಯಿ ದರ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಶ್ರಾವಣ ಮಾಸದಲ್ಲಿ ನಾಗರಪಂಚಮಿ, ವರಮಹಾಲಕ್ಷ್ಮಿ, ರಕ್ಷಾಬಂಧನ, ಕೃಷ್ಣ ಜನ್ಮಾಷ್ಟಮಿ ಹೀಗೆ ಸಾಲು ಸಾಲು ಹಬ್ಬಗಳಿದ್ದು, ತೆಂಗಿನಕಾಯಿಗೆ ಬೇಡಿಕೆ ಹೆಚ್ಚಾಗುತ್ತದೆ. ದರ ಕೂಡ ಏರಿಕೆಯಾಗಲಿದೆ ಎನ್ನಲಾಗಿದೆ.
TAGGED:ಶ್ರಾವಣ