ಗಾಜಿಯಾಬಾದ್: ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ದಿನದಿಂದ ದಿನಕ್ಕೆ ಅಪರಾಧ ಪ್ರಕರಣಗಳು ಹೆಚ್ಚಾಗುತ್ತಿವೆ. ಹೌದು, ಗಾಜಿಯಾಬಾದ್ನ ಬ್ರಿಜ್ ವಿಹಾರ್ನಲ್ಲಿ ಹಗಲು ದರೋಡೆಯೊಂದು ನಡೆದಿದೆ. ಸ್ವಿಗ್ಗಿ ಮತ್ತು ಬ್ಲಿಂಕಿಟ್ ಡೆಲಿವರಿ ಏಜೆಂಟ್ಗಳ ವೇಷದಲ್ಲಿದ್ದ ಇಬ್ಬರು ದುಷ್ಕರ್ಮಿಗಳು ‘ಮಾನ್ಸಿ ಜ್ಯುವೆಲ್ಲರ್ಸ್’ಗೆ ನುಗ್ಗಿ, ಕೇವಲ ಆರು ನಿಮಿಷಗಳಲ್ಲಿ 30 ಲಕ್ಷ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಮತ್ತು ನಗದನ್ನು ದೋಚಿ ಪರಾರಿಯಾಗಿದ್ದಾರೆ.
ಘಟನೆ ವಿವರ
ಗುರುವಾರ ಮಧ್ಯಾಹ್ನ 3:30 ರ ಸುಮಾರಿಗೆ ಈ ಘಟನೆ ನಡೆದಿದೆ. ಆಗ ಅಂಗಡಿಯ ಮಾಲೀಕರು ಊಟಕ್ಕೆ ಹೊರಗಡೆ ಹೋಗಿದ್ದರು. ಅಂಗಡಿಯಲ್ಲಿ ಶುಭಂ ಎಂಬ ಒಬ್ಬ ಉದ್ಯೋಗಿ ಮಾತ್ರ ಇದ್ದರು. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಶಸ್ತ್ರಸಜ್ಜಿತರಾದ ಇಬ್ಬರು ದರೋಡೆಕೋರರು ಬೈಕ್ನಲ್ಲಿ ಬಂದು, ಶುಭಂಗೆ ಬಂದೂಕು ತೋರಿಸಿ ಬೆದರಿಸಿ, ಆತನಿಗೆ ಹಲ್ಲೆ ಮಾಡಿ, ಶೇಖರಣಾ ಘಟಕಗಳನ್ನು ಬಲವಂತವಾಗಿ ತೆರೆಸಿದ್ದಾರೆ. ನಂತರ ಅವರು 125 ಗ್ರಾಂ ಚಿನ್ನ, 20 ಕೆಜಿ ಬೆಳ್ಳಿ ಮತ್ತು 30,000 ರೂಪಾಯಿ ನಗದೊಂದಿಗೆ ಪರಾರಿಯಾಗಿದ್ದಾರೆ.
ಪೊಲೀಸರ ತನಿಖೆ
ಈ ದರೋಡೆಯಲ್ಲಿ ಒಳಗಿನವರ ಕೈವಾಡವಿರುವ ಬಗ್ಗೆ ಪೊಲೀಸರು ಶಂಕಿಸಿದ್ದಾರೆ. ತನಿಖೆ ನಡೆಸಲು ಐದು ತಂಡಗಳನ್ನು ರಚಿಸಲಾಗಿದೆ. ಸಮೀಪದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ಡಿಸಿಪಿ ನಿಮಿಶ್ ಪಾಟೀಲ್ ಮತ್ತು ಎಸಿಪಿ ಶ್ವೇತಾ ಯಾದವ್ ಸೇರಿದಂತೆ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದರು. ದೆಹಲಿಯ ಕಡೆಗೆ ಪರಾರಿಯಾದ ಶಂಕಿತರನ್ನು ಪತ್ತೆಹಚ್ಚಲು ಪೊಲೀಸರು ಪ್ರಯತ್ನಗಳನ್ನು ಮುಂದುವರಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪೊಲೀಸರು ದುಷ್ಕರ್ಮಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
#WATCH | Ghaziabad, UP | DCP Trans Hindon, Ghaziabad, Nimish Patil says, "In PS Link Road, at around 4 pm, an information was received that around 3.30 pm, two unknown men entered his jewellery shop, threatened the worker, and looted around 20 kg of silver ornaments and 125gm of… https://t.co/mpiMtKLWiW pic.twitter.com/QDi6JPtbVH
— ANI (@ANI) July 25, 2025